‘ನಾನು ದರ್ಶನ್ ತೂಗುದೀಪ ಪರ ನಿಲ್ಲುತ್ತೇನೆ, ಸಂತೋಷ ಮಾತ್ರವಲ್ಲ ದುಃಖದಲ್ಲೂ ಭಾಗಿ ಆಗಬೇಕು’; ಭಾವನಾ
ದರ್ಶನ್ ಪ್ರಕರಣಕ್ಕೆ ಸಂಬಂಧಿಸಿ ಅನೇಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರು ದರ್ಶನ್ ಪರ ನಿಂತರೆ ಇನ್ನೂ ಕೆಲವರು ದರ್ಶನ್ ಅವರನ್ನು ವಿರೋಧಿಸಿದ್ದಾರೆ. ದರ್ಶನ್ ಮಾಡಿದ್ದನ್ನು ತಪ್ಪು ಎಂದು ಕೆಲವರು ಕರೆದಿದ್ದಾರೆ. ಆದರೆ, ಭಾವನಾ ರಾಮಣ್ಣ ಅವರು ದರ್ಶನ್ ಪರ ನಿಂತಿದ್ದಾರೆ.
ದರ್ಶನ್ (Darshan) ಅವರು ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿದ್ದಾರೆ. ಈ ಪ್ರಕರಣದಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಈಗ ಭಾವನಾ ರಾಮಣ್ಣ ಅವರು ದರ್ಶನ್ ತೂಗುದೀಪ ಪರ ಮಾತನಾಡಿದ್ದಾರೆ. ‘ಯಾವುದೇ ಹೆಣ್ಣಾದರೂ ಅವರಿಗೆ ಮನೆ ಇರುತ್ತದೆ, ಮನಸ್ಸು ಇರುತ್ತದೆ. 19 ವರ್ಷದ ಹುಡುಗಿಗೆ ಈ ರೀತಿ ಮೆಸೇಜ್ ಬಂದಿದ್ದರೆ ಅವಳು ಆತ್ಮಹತ್ಯೆ ಮಾಡಿಕೊಳ್ಳಬಹುದು. ಘೋರ ಕೃತ್ಯ ನಡೆದ ಬಳಿಕ ಅದರ ಬಗ್ಗೆ ಚರ್ಚೆ ನಡೆಸಬಹುದು ಅಷ್ಟೇ, ಆದರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಭಾರತೀಯರು ಎಮೋಷನಲ್ ಪರ್ಸನಲ್. ದರ್ಶನ್ ಜೊತೆ ಹಲವು ಸಿನಿಮಾ ಮಾಡಿದ್ದೇನೆ. ಫ್ರೆಂಡ್ಲಿ ಆಗಿ ನಾವು ಸಾಕಷ್ಟು ಬಾರಿ ಸೇರಿದ್ದೇವೆ. ನಾನು ದರ್ಶನ್ ಪರವಾಗಿ ನಿಲ್ಲುತ್ತೇನೆ. ಸಂತೋಷವಾಗಿ ಭಾಗಿ ಆಗಿ ದುಃಖದಲ್ಲಿ ಭಾಗಿ ಆಗಿಲ್ಲ ಎಂದರೆ ತಪ್ಪಾಗುತ್ತದೆ’ ಎಂದಿದ್ದಾರೆ ಭಾವನಾ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

