AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಕ್ಕಿ ಹರಿಯುತ್ತಿರುವ ಕುಮಾರಧಾರ ನದಿ, ಸ್ನಾನಘಟ್ಟ ಮತ್ತು ಆಣೆಕಟ್ಟು ಮುಳುಗಡೆ, ನದಿಗಿಳಿಯದಂತೆ ಭಕ್ತಾದಿಗಳಿಗೆ ಎಚ್ಚರಿಕೆ

ಉಕ್ಕಿ ಹರಿಯುತ್ತಿರುವ ಕುಮಾರಧಾರ ನದಿ, ಸ್ನಾನಘಟ್ಟ ಮತ್ತು ಆಣೆಕಟ್ಟು ಮುಳುಗಡೆ, ನದಿಗಿಳಿಯದಂತೆ ಭಕ್ತಾದಿಗಳಿಗೆ ಎಚ್ಚರಿಕೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 27, 2024 | 11:08 AM

Share

ಎರಡು ದಿನಗಳ ಹಿಂದಷ್ಟೇ ನಾವು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬಗ್ಗೆ ವಿಡಿಯೋ ವರದಿಯೊಂದನ್ನು ನೀಡಿದ್ದೇವೆ. ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ಪತ್ನಿ ಉಷಾ ಶಿವಕುಮಾರ್ ಮತ್ತು ಮಗನೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿ ಸುಬ್ರಹ್ಮಣ್ಯನಿಗೆ ಮಹಾಪೂಜೆ ಮತ್ತು ಆಶ್ಲೇಷ ಬಲಿ ಪೂಜೆ ನೆರವೇರಿಸಿದ ಬಗ್ಗೆ ವರದಿ ಮಾಡಲಾಗಿತ್ತು. ಅವತ್ತು ಸಹ ಶ್ರೀಕ್ಷೇತ್ರದಲ್ಲಿ ಮೋಡಕವಿದ ವಾತಾವರಣವಿತ್ತು.

ದಕ್ಷಿಣ ಕನ್ನಡ: ರಾಜ್ಯದ ಕರಾವಳಿ ಪ್ರದೇಶದಲ್ಲಿ ಎರಡು ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಇದರ ಪರಿಣಾಮವಾಗೇ ಕುಕ್ಕೆ ಸುಬ್ರಹ್ಮಣ್ಯ (Kukke Subrahmanya) ಮೂಲಕ ಹಾದು ಹೋಗುವ ಕುಮಾರಧಾರ ನದಿ (Kumaradhara River) ತುಂಬಿ ಹರಿಯುತ್ತಿದೆ. ನದಿ ಯಾವ ಪ್ರಮಾಣದಲ್ಲಿ ಉಕ್ಕಿದೆ ಎಂದರೆ ಕುಮಾರಧಾರ ಕಿಂಡಿ ಆಣೆಕಟ್ಟು (Kindi Dam) ಪೂರ್ತಿಯಾಗಿ ಮುಳುಗಡೆಯಾಗಿದೆ. ಇದನ್ನು ನೀವು ದೃಶ್ಯಗಳಲ್ಲಿ ನೋಡಬಹುದು. ಕುಮಾರಧಾರ ಸ್ನಾನಘಟ್ಟ ಸಹ ಮುಳುಗಡೆಯಾಗಿದೆ. ಇದೇ ಕಾರಣಕ್ಕಾಗಿ ಕುಕ್ಕೆಗೆ ಬರುವ ಭಕ್ತಾದಿಗಳು ನದಿಗಿಳಿಯದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಎಚ್ಚರಿಕೆ ಜಾರಿ ಮಾಡಿದೆ. ನದಿ ತೀರದ ಮತ್ತೊಂದು ಭಾಗದಲ್ಲಿ ಕೆಲ ಭಕ್ತಾದಿಗಳು ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಅವರು ಎಚ್ಚರವಹಿಸಿ ದಡದ ಮೇಲಷ್ಟೇ ಕುಳಿತು ಸ್ನಾನ ಮಾಡುತ್ತಿದ್ದಾರೆ. ನದಿ ಉಕ್ಕಿ ಹರಿಯುವಾಗ ಮೇಲಿಂದ ನೋಡುವವರಿಗೆ ನೀರು ನಿಧಾನಕ್ಕೆ ಮುಂದೆ ಹರಿಯುವಂತೆ ಭಾಸವಾಗುತ್ತದೆ. ಆದರೆ ಒಳಭಾಗಲ್ಲಿ ನೀರಿನ ಸೆಳೆತ ಜೋರಾಗಿರುತ್ತದೆ. ನೀರಿಗಿಳಿಯುವ ಜನ ಹರಿತದ ರಭಸದಲ್ಲಿ ಕೊಚ್ಚಿಕೊಂಡು ಹೋಗುವ ಅಪಾಯವಿರುತ್ತದೆ. ಹಾಗಾಗೇ ಭಕ್ತಾದಿಗಳಿಗೆ ನದಿಗಿಳಿಯದಂತೆ ಕಟ್ಟೆಚ್ಚರ ನೀಡಲಾಗಿದೆ.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಹಿಂದೂಯೇತರ ಅಧಿಕಾರಿ ನೇಮಕ ಆರೋಪ: ಬಿಜೆಪಿಯ ಸುಳ್ಳು ಸುದ್ದಿಯೆಂದ ರಾಮಲಿಂಗಾ ರೆಡ್ಡಿ