ಲೋಕಸಭಾ ಚುನಾವಣೆಯಲ್ಲಾದ ಹಿನ್ನಡೆಯಿಂದ ವಿಚಲಿತ ಶಿವಕುಮಾರ್ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ!
ದೇವಸ್ಥಾನದಲ್ಲಿ ಶಿವಕುಮಾರ್ ಕುಟುಂಬ ಮಹಾಪೂಜೆ ಮತ್ತು ಅಶ್ಲೇಶ ಬಲಿ ಪೂಜೆಯಲ್ಲಿ ಭಾಗಿಯಾಗಿತ್ತೆಂದು ನಮ್ಮ ಮಂಗಳೂರು ವರದಿಗಾರ ಮಾಹಿತಿ ನೀಡಿದ್ದಾರೆ. ಉಪ ಮುಖ್ಯಮಂತ್ರಿಯ ಕುಟುಂಬವನ್ನು ದೇವಸ್ಥಾನದ ವತಿಯಿಂದ ವಾದ್ಯಮೇಳ, ಕುಂಬಕಳಶದೊಂದಿಗೆ ಸ್ವಾಗತಿಸಲಾಯಿತು. ದೇವಸ್ಥಾನದ ಆನೆಯು ಶಿವಕುಮಾರ್, ಅವರ ಪತ್ನಿ ಉಷಾ ಶಿವಕುಮಾರ್ ಮತ್ತು ಮಗನ ತಲೆಗಳ ಮೇಲೆ ಸೊಂಡಿಲನ್ನಿಟ್ಟು ಆಶೀರ್ವಾದ ಮಾಡಿತು.
ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ (Lok Sabha polls) ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಾದ ಹಿನ್ನಡೆಯಿಂದ ವಿಚಲಿತರಾದಂತೆ ಕಾಣುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಸಾಂತ್ವನ ಕಂಡುಕೊಳ್ಳಲು ದೇವರ ಮೊರೆ ಹೋಗುತ್ತಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅವರ ಸಹೋದರ ಡಿಕೆ ಸುರೇಶ್ (DK Suresh), ರಾಜಕಾರಣಕ್ಕೆ ತೀರ ಹೊಸಬರಾಗಿರುವ ಡಾ ಸಿಎನ್ ಮಂಜುನಾಥ್ ಅವರಿಗೆ ಸೋತಿದ್ದು ಶಿವಕುಮಾರ್ ಗೆ ಹೆಚ್ಚಿನ ಆಘಾತವನ್ನುಂಟು ಮಾಡಿದೆ. ಇಂದು ಅವರು ಕುಟುಂಬ ಸಮೇತರಾಗಿ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲ್ಲೂಕಿನಲ್ಲಿರುವ ಕುಕ್ಕೆ ಸುಬ್ರಹಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು. ದೇವಸ್ಥಾನದಲ್ಲಿ ಶಿವಕುಮಾರ್ ಕುಟುಂಬ ಮಹಾಪೂಜೆ ಮತ್ತು ಅಶ್ಲೇಶ ಬಲಿ ಪೂಜೆಯಲ್ಲಿ ಭಾಗಿಯಾಗಿತ್ತೆಂದು ನಮ್ಮ ಮಂಗಳೂರು ವರದಿಗಾರ ಮಾಹಿತಿ ನೀಡಿದ್ದಾರೆ. ಉಪ ಮುಖ್ಯಮಂತ್ರಿಯ ಕುಟುಂಬವನ್ನು ದೇವಸ್ಥಾನದ ವತಿಯಿಂದ ವಾದ್ಯಮೇಳ, ಕುಂಬಕಳಶದೊಂದಿಗೆ ಸ್ವಾಗತಿಸಲಾಯಿತು. ದೇವಸ್ಥಾನದ ಆನೆಯು ಶಿವಕುಮಾರ್, ಅವರ ಪತ್ನಿ ಉಷಾ ಶಿವಕುಮಾರ್ ಮತ್ತು ಮಗನ ತಲೆಗಳ ಮೇಲೆ ಸೊಂಡಿಲನ್ನಿಟ್ಟು ಆಶೀರ್ವಾದ ಮಾಡಿತು. ಕುಟುಂಬದ ಸದಸ್ಯರೆಲ್ಲ ಆನೆಗೆ ನಮಸ್ಕರಿಸುವುದನ್ನು ದೃಶ್ಯಗಳಲ್ಲಿ ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಇವಿಎಂ ಮಿಷನ್ ಮೇಲಿನ ಅನುಮಾನ: ಎಲಾನ್ ಮಸ್ಕ್ ಬೆಂಬಲಿಸಿ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು