ಆಷಾಢ ಮಾಸದಲ್ಲಿ ಶುಭ ಕಾರ್ಯಗಳನ್ನ ಯಾಕೆ ಮಾಡಬಾರದು ತಿಳಿಯಿರಿ

Updated on: Jun 29, 2025 | 6:49 AM

ಆಷಾಡ ಮಾಸದಲ್ಲಿ ಶುಭ ಕಾರ್ಯಗಳನ್ನು ಮಾಡುವುದರ ಬಗ್ಗೆ ಅನೇಕರಲ್ಲಿ ಗೊಂದಲವಿದೆ. ಈ ದಿನಗಳಲ್ಲಿ ಪ್ರಕೃತಿಯ ಸ್ಥಿತಿ, ವಿಷ್ಣು ಶಯನ ಮತ್ತು ಸ್ತ್ರೀಶಕ್ತಿಯ ಪ್ರಾಬಲ್ಯದಿಂದಾಗಿ ಹಿರಿಯರು ಜಪ, ತಪ, ದೇವಿ ಆರಾಧನೆ ಮತ್ತು ದಾನಧರ್ಮಗಳಿಗೆ ಒತ್ತು ನೀಡುತ್ತಾರೆ. ಶುಭ ಕಾರ್ಯಗಳಿಗೆ ಅನಿವಾರ್ಯತೆ ಇದ್ದರೆ ಮಾತ್ರ ಮಾಡಬಹುದು.

ಬೆಂಗಳೂರು, ಜೂನ್​ 29: ಆಷಾಡ ಮಾಸವು ಹಿಂದೂ ಪಂಚಾಂಗದಲ್ಲಿ ವಿಶೇಷವಾದ ತಿಂಗಳಾಗಿದೆ. ಈ ತಿಂಗಳಲ್ಲಿ ಶುಭ ಕಾರ್ಯಗಳನ್ನು ಮಾಡುವುದನ್ನು ಕೆಲವರು ತಪ್ಪಿಸುತ್ತಾರೆ. ಇದಕ್ಕೆ ಹಲವು ಕಾರಣಗಳಿವೆ. ಪ್ರಕೃತಿಯಲ್ಲಿ ಈ ಸಮಯದಲ್ಲಿ ಮಳೆ ಹೆಚ್ಚಾಗಿರುತ್ತದೆ ಮತ್ತು ವಾತಾವರಣ ಬಿಗುವಾಗಿರುತ್ತದೆ. ರೈತಾಪಿ ವರ್ಗಕ್ಕೆ ಕೆಲಸ ಹೆಚ್ಚಾಗಿರುವುದರಿಂದಲೂ ಶುಭ ಕಾರ್ಯಗಳು ಕಡಿಮೆಯಾಗುತ್ತವೆ. ಆಧ್ಯಾತ್ಮಿಕವಾಗಿ, ವಿಷ್ಣು ಶಯನಾವಸ್ಥೆಯಲ್ಲಿರುವುದರಿಂದ ಅವರ ಪೂರ್ಣ ಆಶೀರ್ವಾದ ಸಿಗುವುದಿಲ್ಲ ಎಂದು ನಂಬಿಕೆ ಇದೆ.

Loading...
Unable to load recommendations.
Follow Us
ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More