Daily Horoscope: ಸಿಂಹ ಸಂಯೋಗ ರಾಶಿ ಫಲ; ಆರ್ಥಿಕ ಯೋಗ ನಿಧಾನವಾಗಲಿದೆ

|

Updated on: May 15, 2024 | 10:56 AM

ಜ್ಯೋತಿಷ್ಯದ ಪ್ರಕಾರ, ನಮ್ಮ ದೈನಂದಿನ ಜೀವನವು ಗ್ರಹಗಳ ಚಲನ-ವಲನಗಳಿಂದ ಪ್ರಭಾವಿತವಾಗಿದೆ. ಇಂದಿನ (ಮೇ 15) ರ ಗ್ರಹಗಳ ಚಲನವಲನ ಹೇಗಿದೆ? ಸಿಂಹ ರಾಶಿ ಫಲಾಫಲವನ್ನು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಆಶ್ಲೇಷ, ಯೋಗ: ಗಂಡ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 52 ನಿಮಿಷಕ್ಕೆ, ರಾಹು ಕಾಲ 12:29 ರಿಂದ 14:05ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:42 ರಿಂದ 09:18ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:29ರ ವರೆಗೆ.

ಸಿಂಹ ರಾಶಿಯವರ ಅಂಗಾರಕ ಯೋಗದ ಫಲಾಫಲ: 4 ಮತ್ತು 9ರ ಅಧಿಪತಿಯಾಗಿರುವ ಅಂಗಾರಕ, ಅಷ್ಟಮ ಸ್ಥಾನದಲ್ಲಿ ಅಂಗಾರಕ ಯೋಗ ಸಂಭವಿಸುತ್ತಿದೆ. 11, 2 ಮತ್ತು 3 ಅಂಗಾರಕ ದೃಷ್ಟಿ ಇರುವುದರಿಂದ ನಿಮ್ಮ ಅಸಹಾಯಕತೆ ತೋರಿಸಿಕೊಳ್ಳಬೇಡಿ. ಹೋಸ ಕೆಲಸ ಮಾಡುವಾಗ ಹಲವು ಬಾರಿ ಯೋಚಿಸಿ ನಿರ್ಧಾರ ಕೈಗೊಳ್ಳಿ. ಆರ್ಥಿಕ ಯೋಗ ನಿಧಾನವಾಗಲಿದೆ. ವಾಕ್​ ಶಕ್ತಿಯಿಂದ ಕೆಲಸ ಕಾರ್ಯಗಳಲ್ಲಿ ಜಯವಾಗುತ್ತದೆ. ಅಣ್ಣ-ತಮ್ಮಂದಿರ ನಡುವೆ ಸಣ್ಣ-ಪುಟ್ಟ ಕಲಹ ಆಗುತ್ತದೆ. ವೃತ್ತಿಯಲ್ಲಿ ಚೆನ್ನಾಗಿರುತ್ತದೆ. ಆಕಸ್ಮಿಕ ಧನ ಯೋಗ, ಆಕಸ್ಮಿಕ ಕಾರು ಯೋಗವಿದೆ.