ಯುಗಾದಿಯಿಂದ ಈ ರಾಶಿಯವರ ಜೀವನ ಬೆಲ್ಲದಂತೆ ಸಿಹಿಯಾಗಿರುತ್ತದೆ: ಮಹಿಳೆಯರಿಗೆ ಮಾತ್ರ ಸಂಕಷ್ಟ

Updated on: Mar 19, 2026 | 6:21 AM

ಟಿವಿ9 ಡಿಜಿಟಲ್ ವಾಹಿನಿಯ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಮಾರ್ಚ್ 19ರ ಯುಗಾದಿ ವಿಶೇಷ ದಿನದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನದ ಗ್ರಹಗಳ ಸ್ಥಾನ, ಶುಭ-ಅಶುಭ ಕಾಲಗಳು ಹಾಗೂ ಪ್ರತಿಯೊಂದು ರಾಶಿಗೆ ಆರ್ಥಿಕ, ಕೌಟುಂಬಿಕ, ವೈಯಕ್ತಿಕ ಅಂಶಗಳ ಮೇಲೆ ಪರಿಣಾಮಗಳನ್ನು ಇಲ್ಲಿ ವಿವರವಾಗಿ ತಿಳಿಸಲಾಗಿದೆ.

ಬೆಂಗಳೂರು, ಮಾ.19: ಇಂದು 2026ರ ಮಾರ್ಚ್ 19, ಗುರುವಾರದ ಭವಿಷ್ಯದ ಬಗ್ಗೆ ತಿಳಿಸಲಾಗಿದೆ. ಇದು ವಿಶ್ವಾ ವಸುನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಕೃಷ್ಣ ಪಕ್ಷದ ಅಮಾವಾಸ್ಯೆ ತಿಥಿ, ಉತ್ತರಾಭಾದ್ರ ನಕ್ಷತ್ರ, ಶುಕ್ಲ ಯೋಗ ಮತ್ತು ನವಗವಾನ್ ಕರಣ ಇರತಕ್ಕಂತ ದಿನವಾಗಿದೆ. ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು ಇಂದು ಚಾಂದ್ರಮಾನ ಯುಗಾದಿಯ ಮಹತ್ವವನ್ನು ವಿವರಿಸಿದ್ದಾರೆ. ಹೊಸ ವರ್ಷದ ಆರಂಭವನ್ನು ಸೂಚಿಸುವ ಈ ದಿನವು, ಪರಾಭವ ನಾಮ ಸಂವತ್ಸರದ ಪ್ರಾರಂಭ ಹಾಗೂ ವಸಂತ ನವರಾತ್ರಿಗಳ ಆರಂಭವನ್ನೂ ಗುರುತಿಸುತ್ತದೆ. ಯುಗಾದಿಯನ್ನು ಹಿಂದೂ ಸಂಪ್ರದಾಯದಲ್ಲಿ ವಿಜಯದಶಮಿ, ದೀಪಾವಳಿ ಮತ್ತು ಅಕ್ಷಯ ತೃತೀಯದಂತಹ ಮಹತ್ವದ ಮೂರೂವರೆ ಮುಹೂರ್ತಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇಂದು ಘಟಸ್ಥಾಪನೆ, ಬೇವು-ಬೆಲ್ಲ ಸೇವನೆ, ಶ್ರೀರಾಮ ಪಟ್ಟಾಭಿಷೇಕ ಮತ್ತು ಬ್ರಹ್ಮನು ಸೃಷ್ಟಿಯನ್ನು ಪ್ರಾರಂಭಿಸಿದ ದಿನದ ಮಹತ್ವವನ್ನು ತಿಳಿಸಿದರು. ಇದರ ಜೊತೆಗೆ, ಮೇಷದಿಂದ ಮೀನ ರಾಶಿಯವರೆಗಿನ ದ್ವಾದಶ ರಾಶಿಗಳ ದೈನಂದಿನ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಪ್ರತಿಯೊಂದು ರಾಶಿಯವರಿಗೂ ಆರ್ಥಿಕ ಸ್ಥಿತಿ, ಕೌಟುಂಬಿಕ ಸಂಬಂಧಗಳು, ಉದ್ಯೋಗ, ಆರೋಗ್ಯ, ಪ್ರಯಾಣದ ಯೋಗ, ಅದೃಷ್ಟದ ಬಣ್ಣಗಳು ಮತ್ತು ಮಂತ್ರಗಳ ಕುರಿತು ಮಾಹಿತಿ ಒದಗಿಸಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More