ದಿನ ಭವಿಷ್ಯ: ಇಂದು ಅಪರೂಪದ ಗಜಕೇಸರಿ ಯೋಗ! ಯಾರಿಗೆ ಒಲಿಯಲಿದೆ ರಾಯರ-ಸಾಯಿಬಾಬಾ ಕೃಪೆ?

Updated on: May 21, 2026 | 6:21 AM

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 2026ರ ಮೇ 21ರ ದಿನದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ರವಿ ವೃಷಭದಲ್ಲಿ, ಚಂದ್ರ ಕರ್ಕಾಟಕದ ಪುನರ್ವಸು ನಕ್ಷತ್ರದಲ್ಲಿ ಸಂಚರಿಸುತ್ತಿದ್ದು, ಇದು ಗಜಕೇಸರಿ ಯೋಗವನ್ನು ಸೃಷ್ಟಿಸಿದೆ. ಈ ದಿನದ ರಾಶಿ ಭವಿಷ್ಯದಲ್ಲಿ ವೃತ್ತಿ, ಹಣಕಾಸು, ಆರೋಗ್ಯ ಮತ್ತು ಸಂಬಂಧಗಳ ಕುರಿತು ಮಾರ್ಗದರ್ಶನವಿದೆ.

ಬೆಂಗಳೂರು, ಮೇ,21: ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರ ದ್ವಾದಶ ರಾಶಿಗಳ ದಿನಭವಿಷ್ಯವನ್ನು ಪ್ರಸ್ತುತಪಡಿಸಿದೆ. ಇಂದು ಪರಾಭವನಾಮ ಸಂವತ್ಸರ, ಉತ್ತರಾಯಣ, ಅಧಿಕ ಜೇಷ್ಠ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷ, ಪಂಚಮಿ ತಿಥಿ ಮತ್ತು ಪುನರ್ವಸು ನಕ್ಷತ್ರ, ಗಂಡ ಯೋಗ, ಬಾಲವ ಕರಣ ಇವೆ. ಈ ದಿನದ ರಾಹುಕಾಲ ಮಧ್ಯಾಹ್ನ 1:50 ರಿಂದ 3:26 ರವರೆಗೆ ಇದ್ದರೆ, ಶುಭಕಾಲ ಬೆಳಗ್ಗೆ 12:16 ರಿಂದ ಮಧ್ಯಾಹ್ನ 1:50 ರವರೆಗೆ ಇರುತ್ತದೆ. ರವಿ ವೃಷಭ ರಾಶಿಯಲ್ಲಿ, ಚಂದ್ರ ಕರ್ಕಾಟಕ ರಾಶಿಯ ಪುನರ್ವಸು ನಕ್ಷತ್ರದಲ್ಲಿ ಸಂಚರಿಸುತ್ತಿದ್ದಾನೆ. ಇದು ಗಜಕೇಸರಿ ಯೋಗವನ್ನು ಸೃಷ್ಟಿಸಿದ್ದು, ಈ ದಿನವು ರಾಯರ ಆರಾಧನೆ, ಸಾಯಿಬಾಬಾ ಆರಾಧನೆ ಹಾಗೂ ವಿದ್ಯೆ ಕಲಿಸಿದ ಗುರುಗಳ ಆರಾಧನೆಗೆ ಅತ್ಯಂತ ಪರ್ವಕಾಲವಾಗಿದೆ. ಜನ್ಮದಿನ ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವವರಿಗೆ ಶುಭ ಹಾರೈಸಲಾಗಿದೆ. ಡಾ. ಗುರೂಜಿ ಅವರು ಪ್ರತಿ ರಾಶಿಯವರಿಗೆ ಗ್ರಹಗಳ ಶುಭಫಲ, ವೃತ್ತಿ, ಹಣಕಾಸು, ಆರೋಗ್ಯ, ಸಂಬಂಧಗಳು, ವಾಹನ ಯೋಗ, ಪ್ರಯಾಣ, ಉದ್ಯೋಗಾವಕಾಶಗಳು, ಹಾಗೂ ಅದೃಷ್ಟ ಸಂಖ್ಯೆ, ಬಣ್ಣ ಮತ್ತು ಜಪಿಸಬೇಕಾದ ಮಂತ್ರಗಳ ಕುರಿತು ಮಾಹಿತಿ ನೀಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: May 21, 2026 06:20 AM
Follow Us
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More