Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
ಈ ವಿಡಿಯೋದಲ್ಲಿ ಶಾಲಿವಾಹನ ಶಕೆ 1947ನೇ ಸಾಲಿನ ಈ ದಿನದ ಭವಿಷ್ಯವನ್ನು ತಿಳಿಸಲಾಗಿದೆ. ಪ್ರತಿಯೊಂದು ರಾಶಿಯ ದಿನದ ಫಲಾಫಲಗಳನ್ನು ವಿವರಿಸಲಾಗಿದೆ. ಶುಭ ಸಮಯ, ಪ್ರಯಾಣ ದಿಕ್ಕು, ಅದೃಷ್ಟ ಸಂಖ್ಯೆ, ಜಪಿಸಬೇಕಾದ ಮಂತ್ರಗಳು, ವೃತ್ತಿ, ಆರೋಗ್ಯ ಮತ್ತು ಕುಟುಂಬದ ಬಗ್ಗೆ ಮಾಹಿತಿಯನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಅವರು ತಿಳಿಸಿದ್ದಾರೆ.
ನಿತ್ಯಪಂಚಾಂಗ: ದಿನಾಂಕ 12-01-2025 ಭಾನುವಾರ, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಪುಷ್ಯ ಮಾಸ, ಶುಕ್ಲ ಪಕ್ಷ, ತ್ರಯೋದಶಿ. ತ್ರಯೋದಶಿ ಆದಮೇಲೆ ಮತ್ತೆ ಮಧ್ಯಾಹ್ನದ ನಂತರ ಚತುರ್ದಶಿ ಕೂಡ ಪ್ರಾರಂಭವಾಗುತ್ತೆ. ಮೃಗಶಿರ ನಕ್ಷತ್ರ, ಬ್ರಹ್ಮಯೋಗ, ಗರಜಕರಣ ಇರುವಂತಹ ಈ ದಿನ ರಾಹುಕಾಲ 4:45 ನಿಮಿಷದಿಂದ 6:11 ನಿಮಿಷದ ತನಕ ರಾಹುಕಾಲ ಇರುತ್ತೆ. ಹಾಗೆ ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭ ಕಾಲ ಬೆಳಗ್ಗೆ 9:36 ನಿಮಿಷದಿಂದ 11:02 ನಿಮಿಷದ ತನಕ ಇರುತ್ತದೆ.
ಇಂದು ಸ್ವಾಮಿ ವಿವೇಕಾನಂದರ ಜನ್ಮದಿನ. ಹಾಗೆ ಇಂದು ಕುಮಾರವ್ಯಾಸ ಜಯಂತಿ, ಶಾಕಂಬರಿ ವ್ರತವನ್ನು ಆಚರಣೆ ಮಾಡಿಕೊಳ್ಳುವುದು, ಶಿವನ ಸಮುದ್ರದಲ್ಲಿ ರಥೋತ್ಸವ ನಡೆಯುತ್ತದೆ. ಸ್ವಾಮಿ ವಿವೇಕಾನಂದರ ಆದರ್ಶಗಳು ಸೂರ್ಯ, ಚಂದ್ರರು ಇರುವವರೆಗೂ ಪ್ರಸ್ತುತವಾಗಿರುತ್ತೆ. ಅವರ ಆದರ್ಶಗಳನ್ನು ನಮ್ಮ ಮಕ್ಕಳಿಗೆ ಹೇಳಿಕೊಡಬೇಕು. ಶಕ್ತಿ, ಧೈರ್ಯ, ಆತ್ಮಸ್ಥೈರ್ಯ ಬೇಕು. ಏನಾದರೂ ಒಂದು ಸಾಧನೆ ಮಾಡಬೇಕು ಎಂಬ ಸಂಕಲ್ಪವನ್ನು ಕೂಡ ನಮ್ಮ ಮಕ್ಕಳಿಗೆ ನಾವು ತಿಳಿಸಬೇಕಾಗುತ್ತೆ. ಸ್ವಾಮಿ ವಿವೇಕಾನಂದರ ಜಯಂತಿಯ ಒಂದು ಶುಭಾಶಯಗಳನ್ನು ಕೂಡ ಕೋರುತ್ತಾ ರವಿ ಧನಸ್ಸು ರಾಶಿಯಲ್ಲಿ ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಇಂದಿನ ಗ್ರಹಗಳ ಸಂಚಾರ, ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.