ಇಂದು ಯೋಗಿನಿ ಏಕಾದಶಿ, ಬುಧ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ

Updated on: Jul 10, 2026 | 6:26 AM

ಟಿವಿ9 ಕನ್ನಡ ಡಿಜಿಟಲ್ ದಿನ ಭವಿಷ್ಯ ಕಾರ್ಯಕ್ರಮದಲ್ಲಿ ಜುಲೈ 10, 2026ರ ಶುಕ್ರವಾರದ ದ್ವಾದಶ ರಾಶಿ ಫಲಾಫಲವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಯೋಗಿನಿ ಏಕಾದಶಿ, ಬುಧ ಜಯಂತಿಯ ಶುಭದಿನವಾದ ಇಂದು ಲಕ್ಷ್ಮಿ ಆರಾಧನೆಗೆ ಪವಿತ್ರ ದಿನ. ಮೇಷ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದ್ದು, ವೃಷಭ ರಾಶಿಯವರು ನಿರ್ಲಕ್ಷ್ಯದಿಂದ ದೂರವಿರಿ ಎಂದು ತಿಳಿಸಿದ್ದಾರೆ.

2026ರ ಜುಲೈ 10ರ, ಶುಕ್ರವಾರದ ದೈನಂದಿನ ರಾಶಿಫಲಗಳನ್ನು ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ‘ಟಿವಿ9 ಕನ್ನಡ ಡಿಜಿಟಲ್​’ ದಿನ ಭವಿಷ್ಯ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಪರಾಭವ ನಾಮ ಸಂವತ್ಸರ, ಉತ್ತರಾಯಣ, ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಏಕಾದಶಿ ಇಂದಿನ ಪ್ರಮುಖ ಅಂಶಗಳು. ಇದು ಯೋಗಿನಿ ಏಕಾದಶಿಯ ಪವಿತ್ರ ದಿನವಾಗಿದ್ದು, ಏಕಾದಶಿ ಉಪವಾಸವು ಹತ್ತು ಹಬ್ಬಗಳಿಗೆ ಸಮಾನ ಎಂದು ತಿಳಿಸಿದ್ದಾರೆ. ಇಂದು ಬುದ್ಧಿ ಕಾರಕ ಬುಧ ಗ್ರಹದ ಜಯಂತಿಯ ದಿನವೂ ಹೌದು. ಲಕ್ಷ್ಮಿ ದೇವಿಯ ಆರಾಧನೆಗೆ ಈ ಶುಕ್ರವಾರ ಅತ್ಯಂತ ಪವಿತ್ರ ದಿನವಾಗಿದೆ ಎಂದು ಗುರೂಜಿ ಹೇಳಿದ್ದಾರೆ. ಹಣಕಾಸಿನ ತೊಂದರೆ ಇರುವವರಿಗೆ ಇಂದು ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಸುವರ್ಣಾವಕಾಶ ಎಂದು ಅವರು ತಿಳಿಸಿದ್ದಾರೆ.

ರಾಹುಕಾಲವು ಬೆಳಗ್ಗೆ 10:47 ರಿಂದ ಮಧ್ಯಾಹ್ನ 12:23 ರವರೆಗೆ ಇರುತ್ತದೆ. ಸಂಕಲ್ಪ ಕಾಲವು 12:24 ರಿಂದ 2:01 ರವರೆಗೆ ಇರಲಿದೆ. ಸೂರ್ಯ ಮಿಥುನ ರಾಶಿಯಲ್ಲಿದ್ದರೆ, ಚಂದ್ರ ಮೇಷ ರಾಶಿಯಲ್ಲಿ ಸಂಚರಿಸಲಿದ್ದಾನೆ.

Loading...
Unable to load recommendations.
Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More