Daily Horoscope: ಚಂದ್ರನು ಮಕರ ರಾಶಿಯಿಂದ ಶ್ರವಣ ನಕ್ಷತ್ರದೆಡೆಗೆ ಸಂಚಾರ

Updated on: Jun 15, 2025 | 6:42 AM

ಜೂನ್ 15ರ ದಿನಭವಿಷ್ಯವನ್ನು ಡಾ. ಬಸವರಾಜ ಗುರೂಜಿ ವಿಡಿಯೋದಲ್ಲಿ ವಿವರಿಸಿದ್ದಾರೆ. ಮೇಷದಿಂದ ಮೀನ ರಾಶಿಯವರ ಫಲಾಫಲಗಳನ್ನು ತಿಳಿಸಲಾಗಿದೆ. ಪ್ರತಿ ರಾಶಿಗೆ ಗ್ರಹಗಳ ಪ್ರಭಾವ, ಶುಭ ಸಂಖ್ಯೆ, ದಿಕ್ಕು ಮತ್ತು ಮಂತ್ರಗಳನ್ನು ಉಲ್ಲೇಖಿಸಲಾಗಿದೆ. ಆರ್ಥಿಕ, ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಕುರಿತಾಗಿ ತಿಳಿಸಲಾಗಿದೆ.

ಬೆಂಗಳೂರು, ಜೂನ್​ 15: ಭಾನುವಾರದ ದಿನಭವಿಷ್ಯವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಈ ದಿನ ಮಿಥುನ ಸಂಕ್ರಮಣ ಮತ್ತು ಬುಧಾದಿತ್ಯ ಯೋಗವಿದೆ. ಮೇಷ ರಾಶಿಯವರಿಗೆ ಐದು ಗ್ರಹಗಳ ಶುಭಫಲ, ಆರ್ಥಿಕ ಪ್ರಗತಿ ಮತ್ತು ಆರೋಗ್ಯ ಸುಧಾರಣೆ. ವೃಷಭ ರಾಶಿಯವರು ಆತ್ಮವಿಶ್ವಾಸದಿಂದ ಇರಬೇಕು ಮತ್ತು ಅನಗತ್ಯ ಘರ್ಷಣೆಗಳನ್ನು ತಪ್ಪಿಸಬೇಕು ಎಂಬ ಸಲಹೆ ನೀಡಲಾಗಿದೆ. ಮಿಥುನ ರಾಶಿಯವರಿಗೆ ವೃತ್ತಿಪರ ಪ್ರಗತಿ ಮತ್ತು ಹಳೆಯ ಬಾಕಿ ವಸೂಲಿಯಾಗುವ ಸಾಧ್ಯತೆ ಇದೆ. ಪ್ರತಿ ರಾಶಿಗೂ ಶುಭ ಸಂಖ್ಯೆಗಳು, ದಿಕ್ಕು ಮತ್ತು ಜಪಿಸಬೇಕಾದ ಮಂತ್ರಗಳನ್ನು ಉಲ್ಲೇಖಿಸಲಾಗಿದೆ.

Follow Us
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More