Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ

Updated on: May 02, 2025 | 6:47 AM

ಡಾ. ಬಸವರಾಜ ಗುರೂಜಿ ಅವರು ಮೇ 2, 2025 ರ ದಿನದ ರಾಶಿ ಭವಿಷ್ಯವನ್ನು ತಿಳಿಸಿದ್ದಾರೆ. ಮೇಷ, ವೃಷಭ ಮತ್ತು ಮಿಥುನ ರಾಶಿಯವರಿಗೆ ಆರ್ಥಿಕ ಪ್ರಗತಿ, ಉತ್ತಮ ಆರೋಗ್ಯ ಮತ್ತು ಸಂತೋಷದ ದಿನವಾಗಿರುತ್ತದೆ. ಪ್ರತಿಯೊಂದು ರಾಶಿಗೂ ನಿರ್ದಿಷ್ಟ ಬಣ್ಣ ಮತ್ತು ದಿಕ್ಕಿನ ಪ್ರಯಾಣ ಶುಭಕರ ಎಂದು ಸೂಚಿಸಲಾಗಿದೆ.

ಬೆಂಗಳೂರು, ಮೇ 2: ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ವಿವಿಧ ರಾಶಿಗಳ ಫಲಾಫಲಗಳನ್ನು ತಿಳಿಸಿದ್ದಾರೆ. ಈ ದಿನ ಮೇಷ ರಾಶಿಯವರಿಗೆ ಆರ್ಥಿಕವಾಗಿ ಉತ್ತಮ ದಿನವಾಗಿದೆ. ಆದರೆ, ಅತಿಯಾಗಿ ಮಾತನಾಡುವುದನ್ನು ತಪ್ಪಿಸಬೇಕು ಎಂದು ಸೂಚಿಸಲಾಗಿದೆ. ವೃಷಭ ರಾಶಿಯವರಿಗೆ ಹೊಸ ಆಲೋಚನೆಗಳು ಮತ್ತು ಆರ್ಥಿಕ ಪ್ರಗತಿಯ ಸಾಧ್ಯತೆಯಿದೆ. ಪ್ರತಿ ರಾಶಿಗೂ ನಿರ್ದಿಷ್ಟ ಬಣ್ಣ ಮತ್ತು ಯಾವ ದಿಕ್ಕಿನಲ್ಲಿ ಪ್ರಯಾಣಿಸಿದರೆ ಶುಭಕರ ಎಂಬುವುದನ್ನು ತಿಳಿಸಿಕೊಟ್ಟಿದ್ದಾರೆ.

Published on: May 02, 2025 06:46 AM