Daily horoscope: ಈ ರಾಶಿಯವರ ಗೃಹ ನಿರ್ಮಾಣದ ಕನಸು ಇಂದು ಇಡೇರುತ್ತದೆ

|

Updated on: Dec 25, 2024 | 6:56 AM

ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಅವರು ಇಂದಿನ ರಾಶಿ ಭವಿಷ್ಯವನ್ನು ತಿಳಿಸಿದ್ದಾರೆ. ಗ್ರಹಗಳ ಸ್ಥಾನ, ನಕ್ಷತ್ರಗಳು ಮತ್ತು ತಿಥಿಗಳ ಆಧಾರದ ಮೇಲೆ ಈ ಭವಿಷ್ಯವಾಣಿ ಮಾಡಲಾಗಿದೆ. ವ್ಯಕ್ತಿಯ ಭವಿಷ್ಯದ ಜೊತೆಗೆ ರಾಜಕೀಯ, ಆರ್ಥಿಕ ಮತ್ತು ದೇಶದ ಭವಿಷ್ಯದ ಬಗ್ಗೆಯೂ ಮಾಹಿತಿ ಲಭ್ಯವಿದೆ. ಪ್ರಾಚೀನ ಕಾಲದಿಂದಲೂ ರಾಶಿ ಭವಿಷ್ಯವು ಜನರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ದೈನಂದಿನ ರಾಶಿ ಭವಿಷ್ಯದ ಮೂಲಕ ಭವಿಷ್ಯದ ಮುನ್ಸೂಚನೆಯನ್ನು ಹೇಳುವುದು ಪ್ರಾಚೀನ ಅಭ್ಯಾಸವಾಗಿದೆ ಮತ್ತು ಇಂದಿಗೂ ಪ್ರಸ್ತುತವಾಗಿದೆ. ರಾಶಿ ಭವಿಷ್ಯವು ಗ್ರಹಗಳ ಸ್ಥಾನ, ನಕ್ಷತ್ರಗಳು, ತಿಥಿ ಮತ್ತು ಹೆಚ್ಚಿನವುಗಳಂತಹ ವಿವಿಧ ಜ್ಯೋತಿಷ್ಯ ಅಂಶಗಳನ್ನು ಆಧರಿಸಿ ವ್ಯಕ್ತಿಯ ಭವಿಷ್ಯವನ್ನು ಊಹಿಸುತ್ತದೆ. ಜ್ಯೋತಿಷ್ಯವು ಬಾಹ್ಯಾಕಾಶದ ಕಾಯಗಳ ಸ್ಥಾನಗಳ ಆಧಾರದ ಮೇಲೆ ಮಾನವನ ವ್ಯಕ್ತಿತ್ವ, ಭವಿಷ್ಯ ಇತ್ಯಾದಿಗಳನ್ನು ತಿಳಿಯಬಹುದೆಂಬ ನಂಬಿಕೆ. ಜ್ಯೋತಿಷ್ಯದಿಂದ ಕೇವಲ ಮಾನವನ ಭವಿಷ್ಯವಲ್ಲದೇ, ರಾಜಕೀಯ,ದೇಶ,ಆರ್ಧಿಕ, ಹೀಗೆ ಹತ್ತು ಹಲವುಗಳ ಬಗ್ಗೆ ಭವಿಷ್ಯವನ್ನು ತಿಳಿಯಬಹುದಾಗಿದೆ. ಇಂದಿನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಮೂಲಾ, ಮಾಸ: ಮಾರ್ಗಶಿರ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ದಶಮೀ, ನಿತ್ಯನಕ್ಷತ್ರ:ಸ್ವಾತೀ, ಯೋಗ: ಅತಿಗಂಡ​, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 56 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 09 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:33 ರಿಂದ 13:57ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:20 ರಿಂದ 09:45 ರವರೆಗೆ, ಗುಳಿಕ ಕಾಲ ಬೆಳಿಗ್ಗೆ 11:09 ರಿಂದ ಮಧ್ಯಾಹ್ನ 12:33 ರವರೆಗೆ.