AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ನಕ್ಷತ್ರದ ದಿನ ಯಾರಿಗೆ ಅದೃಷ್ಟ?: ವೃಷಭ ರಾಶಿಯವರು ಎಚ್ಚರ, ಮಿಥುನಕ್ಕೆ ಧನಲಾಭ

ಈ ನಕ್ಷತ್ರದ ದಿನ ಯಾರಿಗೆ ಅದೃಷ್ಟ?: ವೃಷಭ ರಾಶಿಯವರು ಎಚ್ಚರ, ಮಿಥುನಕ್ಕೆ ಧನಲಾಭ

ಅಕ್ಷಯ್​ ಪಲ್ಲಮಜಲು​​
|

Updated on: Oct 29, 2026 | 6:17 AM

Share

ಡಾ. ಬಸವರಾಜ ಗುರೂಜಿ ಅವರಿಂದ 29 ಅಕ್ಟೋಬರ್ 2026, ಗುರುವಾರದ ದಿನಭವಿಷ್ಯ. ಪ್ರಭವನಾಮ ಸಂವತ್ಸರದಲ್ಲಿ ಸಂಕಷ್ಟ ಚತುರ್ಥಿ ಮತ್ತು ಹಾಸನಾಂಬ ದೇವಿಯ ದೇವಾಲಯದ ಬಾಗಿಲು ತೆರೆಯುವ ವಿಶೇಷ ದಿನ. ಮೇಷದಿಂದ ಮೀನದವರೆಗಿನ ದ್ವಾದಶ ರಾಶಿಗಳ ಆರ್ಥಿಕ, ಉದ್ಯೋಗ, ಆರೋಗ್ಯ, ಸಂಬಂಧ ಹಾಗೂ ಮಂಗಳಕರ ಬಣ್ಣ, ಸಂಖ್ಯೆ, ಮಂತ್ರಗಳ ಕುರಿತು ಸಮಗ್ರ ಮಾಹಿತಿ.

ಬೆಂಗಳೂರು, ಅ.29: ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 29-10-2026, ಗುರುವಾರದಂದು ಪ್ರಭವನಾಮ ಸಂವತ್ಸರ, ಆಶ್ವೀಜ ಮಾಸ, ಕೃಷ್ಣ ಪಕ್ಷದ ಚೌತಿ, ರೋಹಿಣಿ ನಕ್ಷತ್ರದ ಫಲಾಫಲಗಳನ್ನು ನೀಡಿದ್ದಾರೆ. ಈ ದಿನ ರಾಹುಕಾಲ ಮಧ್ಯಾಹ್ನ 1:31 ರಿಂದ 2:59 ನಿಮಿಷದ ತನಕ ಇರುತ್ತದೆ. ಸರ್ವಸಿದ್ಧಿಕಾಲ ಮತ್ತು ಶುಭಕಾಲ 12:03 ರಿಂದ 1:31 ನಿಮಿಷದ ತನಕ. ಇಂದು ಸಂಕಷ್ಟ ಚತುರ್ಥಿ ಮತ್ತು ಹಾಸನಾಂಬ ದೇವಿಯ ದೇವಾಲಯದ ಬಾಗಿಲು ತೆರೆಯುವಂತಹ ವಿಶೇಷ ಪರ್ವ ದಿನವಾಗಿದೆ. ರವಿ ತುಲಾ ರಾಶಿಯಲ್ಲಿ ಮತ್ತು ಚಂದ್ರ ವೃಷಭ ರಾಶಿಯ ರೋಹಿಣಿ ನಕ್ಷತ್ರದಲ್ಲಿ ಸಂಚರಿಸಲಿದ್ದಾನೆ. ಮೇಷ ರಾಶಿಯವರಿಗೆ ಆರ್ಥಿಕ ವಿಷಯಗಳಲ್ಲಿ ಮನ್ನಣೆ ಸಿಗುತ್ತದೆ, ಉದ್ಯೋಗದಲ್ಲಿ ಶುಭವಾಗುತ್ತದೆ, ಆದರೆ ಕೆಲವರ ಮಾತು ನಂಬಿ ಮೋಸ ಹೋಗುವ ಸಾಧ್ಯತೆ ಇರುತ್ತದೆ. ವೃಷಭ ರಾಶಿಯವರಿಗೆ ಪ್ರಯತ್ನಗಳಲ್ಲಿ ವಿಫಲತೆ ಎದುರಾಗಬಹುದು, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಮಾರ್ಗದರ್ಶನ ಪಡೆಯುವುದು ಉತ್ತಮ. ಮಿಥುನ ರಾಶಿಯವರಿಗೆ ಆಕಸ್ಮಿಕ ಧನಲಾಭ ಮತ್ತು ಕಾರ್ಯಸಿದ್ಧಿ ಸಾಧ್ಯತೆಯಿದೆ, ಉದ್ಯೋಗದಲ್ಲಿ ಬಡ್ತಿ ಸಿಗುವ ಯೋಗವಿದೆ. ಇಂದಿನ ರಾಶಿ ಭವಿಷ್ಯದಲ್ಲಿ ಪ್ರತಿಯೊಂದು ರಾಶಿಗೂ ಆರೋಗ್ಯ, ಉದ್ಯೋಗ, ಆರ್ಥಿಕ ಸ್ಥಿತಿ, ಸಂಬಂಧಗಳು, ಶುಭ ಬಣ್ಣ, ಸಂಖ್ಯೆ ಮತ್ತು ಜಪಿಸಬೇಕಾದ ಮಂತ್ರದ ಬಗ್ಗೆ ವಿವರವಾದ ಮಾರ್ಗದರ್ಶನ ನೀಡಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More