AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವರ ಪೂಜೆಗೆ ಯಾವ ಸಮಯ ಸೂಕ್ತ?: ಇಲ್ಲಿದೆ ಮಾಹಿತಿ

ದೇವರ ಪೂಜೆಗೆ ಯಾವ ಸಮಯ ಸೂಕ್ತ?: ಇಲ್ಲಿದೆ ಮಾಹಿತಿ

ಪ್ರಸನ್ನ ಹೆಗಡೆ
|

Updated on:Nov 20, 2025 | 6:36 AM

Share

ದೈನಂದಿನ ಪೂಜೆಗೆ ಬೆಳಗ್ಗೆ ಅಥವಾ ಸಂಜೆ ಯಾವುದು ಉತ್ತಮ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಬ್ರಾಹ್ಮೀ ಮುಹೂರ್ತ ಮತ್ತು ಗೋದೋಳಿ ಮುಹೂರ್ತ ಎರಡಕ್ಕೂ ಸಮಾನ ಪ್ರಾಮುಖ್ಯತೆ ಇದೆ. ಕೇವಲ ಸಮಯಕ್ಕಿಂತಲೂ ನಿರ್ಮಲ ಮನಸ್ಸು, ದೃಢ ಭಕ್ತಿ ಮತ್ತು ಭಗವಂತನ ಸ್ಮರಣೆಯೇ ಮುಖ್ಯ. ಕೆಲಸದ ಕಾರಣ ಬೆಳಗಿನ ಪೂಜೆ ಅಸಾಧ್ಯವಾದರೆ, ಸಂಧ್ಯಾಕಾಲದಲ್ಲಿ ಮಾನಸಿಕ ಪೂಜೆ ಮತ್ತು ಧ್ಯಾನಕ್ಕೆ ಒತ್ತು ನೀಡಬಹುದು.

ಭಗವಂತನ ಅನುಗ್ರಹವಿಲ್ಲದೆ ಈ ಜಗತ್ತಿನಲ್ಲಿ ಯಾವುದು ಚಲಿಸುವುದಿಲ್ಲ. ಹೀಗಾಗಿ, ದೈನಂದಿನ ಜೀವನದ ಸಂಕಷ್ಟಗಳನ್ನು ನಿಭಾಯಿಸಲು ಮತ್ತು ಅದೃಷ್ಟವನ್ನು ಕಾಪಾಡಿಕೊಳ್ಳಲು ಭಗವಂತನ ಕೃಪೆಗೆ ಪಾತ್ರರಾಗುವುದು ಮುಖ್ಯ. ಅನೇಕ ಜನರು ಬೆಳಗಿನ ಜಾವ ಅಥವಾ ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ ಮಾಡಲು ಸಾಧ್ಯವಾಗದಿದ್ದಾಗ ಸಂಧ್ಯಾಕಾಲದಲ್ಲಿ ಪೂಜೆ ಮಾಡಬಹುದೇ ಎಂದು ಕೇಳುತ್ತಾರೆ. ಬ್ರಾಹ್ಮೀ ಮುಹೂರ್ತಕ್ಕೆ ಇರುವಷ್ಟೇ ಪ್ರಾಮುಖ್ಯತೆ ಗೋದೋಳಿ ಮುಹೂರ್ತಕ್ಕೂ ಇದೆ ಎಂದು ತಿಳಿಸಲಾಗಿದೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯಗಳು ದೇವತಾರಾಧನೆಗೆ ವಿಶೇಷವಾಗಿ ಪ್ರಶಸ್ತವಾಗಿವೆ. ದೃಢವಾದ ಭಕ್ತಿ, ನಿರ್ಮಲ ಮನಸ್ಸು ಮತ್ತು ಸದ್ಭಾವನೆಯೊಂದಿಗೆ ಮಾಡಿದ ಪೂಜೆ ಅಥವಾ ಭಗವಂತನ ನಾಮಸ್ಮರಣೆ ಎಂದಿಗೂ ವ್ಯರ್ಥವಾಗುವುದಿಲ್ಲ. ನೀವು ಯಾವುದೇ ಪರಿಸ್ಥಿತಿಯಲ್ಲಿರಲಿ, ಮಾನಸಿಕ ಪೂಜೆಗೆ ಹೆಚ್ಚಿನ ಪ್ರಾಶಸ್ತ್ಯವಿದೆ. “ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತಾ ಪ್ರಯಚ್ಛತಿ” ಎಂಬ ಶ್ಲೋಕವು ಭಕ್ತಿಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಬೆಳಗಿನ ಜಾವ ಪೂಜೆ ಅಸಾಧ್ಯವಾದರೆ, ಸಂಧ್ಯಾಕಾಲದಲ್ಲಿ ಸ್ನಾನ ಮಾಡಿ, ಶುದ್ಧ ಮನಸ್ಸಿನಿಂದ ಧ್ಯಾನ, ಜಪ ಅಥವಾ ಆರತಿ ಮಾಡಬಹುದು. ಪರಿಕರಗಳಿಲ್ಲದೆಯೂ ಸಹ ಭಕ್ತಿಪೂರ್ವಕ ಮಾನಸಿಕ ಪೂಜೆಯು ಭಗವಂತನನ್ನು ಒಲಿಸಿಕೊಳ್ಳುತ್ತದೆ ಎಂದು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

Published on: Nov 20, 2025 06:35 AM