ರಿಷಬ್ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ ಶೆಟ್ಟಿ
ತಮ್ಮಣ್ಣ ಶೆಟ್ಟಿ ಅವರು ರಿಷಬ್ ಶೆಟ್ಟಿ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಅವರ ನಟನೆಯ ‘ಕಾಂತಾರ’ ಸಿನಿಮಾ ಬಂದ ಬಳಿಕ ಎಲ್ಲವೂ ಬದಲಾಯಿತು ಎಂಬುದು ಅವರ ಅಭಿಪ್ರಾಯ. ಈಗ ದೈವನರ್ತಕ ತಮಣ್ಣ ಶೆಟ್ಟಿ ಅವರು ಹೊಸ ವಿಷಯ ಹೇಳಿಕೊಂಡಿದ್ದಾರೆ. ರಿಷಬ್ಗೆ ಇದುವೇ ತಿರುಗುಬಾಣ ಆಗುತ್ತದೆ ಎಂದು ಹೇಳಿದ್ದಾರೆ.
‘ಕಾಂತಾರ’ ಸಿನಿಮಾದಲ್ಲಿ ದೈವದ ವಿಷಯ ಹೇಳಲಾಗಿದೆ. ಈ ಬಗ್ಗೆ ಕೆಲವರಿಗ ಆಕ್ಷೇಪ ಇದೆ. ಇತ್ತೀಚೆಗೆ ರಿಷಬ್ ಅವರು ದೈವ ಕೋಲದಲ್ಲಿ ಭಾಗಿಯಾಗಿದ್ದರು. ಅದನ್ನು ನಿಯಮದ ಪ್ರಕಾರ ನಡೆಸಿಲ್ಲ ಎಂಬ ಆರೋಪ ಇದೆ. ಹೀಗಿರುವಾಗಲೇ ದೈವನರ್ತಕ ತಮ್ಮಣ್ಣ ಶೆಟ್ಟಿ ಅವರು ಒಂದು ಗಂಭೀರ ಭವಿಷ್ಯ ನುಡಿದಿದ್ದಾರೆ. ‘ದೈವ ಶಿಕ್ಷೆ ಕೊಡುವ ರೀತಿಯೇ ಬೇರೆ ಇದೆ. ನೀವು ಯಾವ ರೀತಿಯಲ್ಲಿ ತಪ್ಪು ಮಾಡಿದ್ದೀರಿ, ಶಿಕ್ಷೆ ಕೂಡ ಅದೇ ರೀತಿಯಲ್ಲಿ ಬರುತ್ತದೆ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
