ಉತ್ತರ ಕನ್ನಡ: ಫಕೀರರ ವೇಷದಲ್ಲಿ ಅಮಾಯಕರನ್ನ ಮೋಸ ಮಾಡ್ತಿದ್ದ ಯುವಕರು ವಶಕ್ಕೆ
ಫಕೀರರ ವೇಷದಲ್ಲಿ ಅಮಾಯಕರನ್ನು ಮೋಸ ಮಾಡುತ್ತಿದ್ದ ಯುವಕರನ್ನು ಹಿಡಿದ ಗ್ರಾಮಸ್ಥರು, ಪೊಲೀಸರಿಗೆ ಒಪ್ಪಿಸಿದ ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿ(Dandeli)ಯ ಗಾಂಧಿನಗರದಲ್ಲಿ ನಡೆದಿದೆ. ಬಂಧಿತರು ಆರೋಪಿಗಳು ಮುಂಬೈ ಮೂಲದ ಯುವಕರಾದ ಅರುಣ್ ಹಾಗೂ ವಿಷ್ಣು ಆಗಿದ್ದಾರೆ.
ಉತ್ತರ ಕನ್ನಡ, ಡಿ.09: ಫಕೀರರ ವೇಷದಲ್ಲಿ ಅಮಾಯಕರನ್ನು ಮೋಸ ಮಾಡುತ್ತಿದ್ದ ಯುವಕರನ್ನು ಹಿಡಿದ ಗ್ರಾಮಸ್ಥರು, ಪೊಲೀಸರಿಗೆ ಒಪ್ಪಿಸಿದ ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿ(Dandeli)ಯ ಗಾಂಧಿನಗರದಲ್ಲಿ ನಡೆದಿದೆ. ಬಂಧಿತರು ಆರೋಪಿಗಳು ಮುಂಬೈ ಮೂಲದ ಯುವಕರಾದ ಅರುಣ್ ಹಾಗೂ ವಿಷ್ಣು ಆಗಿದ್ದು, ಇವರು ಮನೆ ಮನೆ ತಿರುಗಾಡುತ್ತಾ ಜನರನ್ನು ಮೋಸ ಮಾಡುತ್ತಿದ್ದರೆಂಬ ಆರೋಪ ಕೇಳಿಬಂದಿದೆ. ಒಂದಿಬ್ಬರು ಇರುತ್ತಿದ್ದ ಮನೆಗಳನ್ನು ಗುರುತು ಮಾಡಿಕೊಂಡು, ಸಮಸ್ಯೆಗಳನ್ನು ಹೇಳಿಕೊಂಡು ಜನರಿಂದ ಹಣ ಕೀಳಲಾರಂಭಿಸಿದ್ದರಂತೆ. ಸಂಶಯಗೊಂಡು ವಿಚಾರಣೆ ಮಾಡಿದಾಗ ಖದೀಮರು ಬಾಯಿ ಬಿಟ್ಟಿದ್ದಾರೆ. ಕೂಡಲೇ ದಾಂಡೇಲಿ ಪೊಲೀಸರಿಗೆ ಗ್ರಾಮಸ್ಥರು ಒಪ್ಪಿಸಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ