Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಶೋಕ ಸ್ವಭಾವವೇ ಹಾಗೆ, ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ಎಸ್ ಅರ್ ವಿಶ್ವನಾಥ್, ಬಿಜೆಪಿ ಶಾಸಕ

ಅಶೋಕ ಸ್ವಭಾವವೇ ಹಾಗೆ, ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ಎಸ್ ಅರ್ ವಿಶ್ವನಾಥ್, ಬಿಜೆಪಿ ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 09, 2023 | 4:43 PM

ವಿರೋಧ ಪಕ್ಷದ ನಾಯಕ ನೇರವಾಗಿ ಅಧಿಕಾರಿಗಳೊಂದಿಗೆ ಮಾತಾಡಬಹುದು ಮತ್ತು ಮುಖ್ಯಮಂತ್ರಿಯೊಂದಿಗೂ ಸಮಸ್ಯೆಗಳನ್ನು ಚರ್ಚಿಸಬಹುದು ಈ ಹಿನ್ನೆಲೆಯಲ್ಲೇ ಅವರು ಶಾಸಕರನ್ನು ಜೊತೆಗೆ ಕರೆದುಕೊಂಡು ಹೋಗಬೇಕಾಗುತ್ತದೆ, ಈ ಸ್ಥಾನ ಅವರಿಗೆ ಈಗಿನ್ನೂ ಹೊಸದಾಗಿರುವುದರಿಂದ ಮುಂಬರುವ ದಿನಗಳಲ್ಲಿ ಸುಧಾರಿಸಿಕೊಳ್ಳಬಹುದು ಎಂದು ಯಲಹಂಕ ಶಾಸಕ ವಿಶ್ವನಾಥ್ ಹೇಳಿದರು.

ಬೆಂಗಳೂರು: ಮೊದಲಿನಿಂದಲೂ ಆರ್ ಅಶೋಕ (R Ashoka) ಸ್ವಭಾವವೇ ಹಾಗೆ, ಯಾರನ್ನೂ ವಿಶ್ವಾಸಕ್ಕೆ ತೆಗೆದದುಕೊಳ್ಳಲ್ಲ, ದಿಢೀರ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ನಿನ್ನೆ ಬೆಳಗಾವಿ ಅಧಿವೇಶನದಲ್ಲಿ ಅಶೋಕ ಮಾತಾಡುತ್ತಿರುವ ಸಮಯದಲ್ಲೇ ಸದನದಿಂದ ಹೊರನಡೆದ ಹಿರಿಯ ಬಿಜೆಪಿ ಶಾಸಕ ಎಸ್ ಅರ್ ವಿಶ್ವನಾಥ್ (SR Vishwanath) ಹೇಳಿದರು, ನಗರದಲ್ಲಿಂದು ಟಿವಿ9 ವರದಿಗಾರನೊಂದಿಗೆ ಮಾತಾಡಿದ ಅವರು, ವಿರೋಧ ಪಕ್ಷದ ನಾಯಕನಾದವನ (Leader of Opposition) ಮೇಲೆ ದೊಡ್ಡ ಜವಾಬ್ದಾರಿ ಇರುತ್ತದೆ, ಪಕ್ಷದ ಶಾಸಕರ ಹೆಗಲ ಮೇಲೆ ಕೈಹಾಕಿ ವಿಶ್ವಾಸದಿಂದ ಮಾತಾಡಬೇಕಾಗುತ್ತದೆ, ಕಾರ್ಯಕರ್ತರೊಂದಿಗೆ ಉತ್ತಮ ಬಾಂಧವ್ಯ ಇಟ್ಟಕೊಳ್ಳಬೇಕಾಗುತ್ತದೆ ಯಾಕೆಂದರೆ ಅವರಿಂದಲೇ ಪಕ್ಷ, ಪಕ್ಷದ ಚಟುವಟಿಕೆಗಳಿಗೆ ಜೀವ ತುಂಬುವವರೇ ಅವರು ಎಂದು ವಿಶ್ವನಾಥ್ ಹೇಳಿದರು. ವಿರೋಧ ಪಕ್ಷದ ನಾಯಕ ನೇರವಾಗಿ ಅಧಿಕಾರಿಗಳೊಂದಿಗೆ ಮಾತಾಡಬಹುದು ಮತ್ತು ಮುಖ್ಯಮಂತ್ರಿಯೊಂದಿಗೂ ಸಮಸ್ಯೆಗಳನ್ನು ಚರ್ಚಿಸಬಹುದು ಈ ಹಿನ್ನೆಲೆಯಲ್ಲೇ ಅವರು ಶಾಸಕರನ್ನು ಜೊತೆಗೆ ಕರೆದುಕೊಂಡು ಹೋಗಬೇಕಾಗುತ್ತದೆ, ಈ ಸ್ಥಾನ ಅವರಿಗೆ ಈಗಿನ್ನೂ ಹೊಸದಾಗಿರುವುದರಿಂದ ಮುಂಬರುವ ದಿನಗಳಲ್ಲಿ ಸುಧಾರಿಸಿಕೊಳ್ಳಬಹುದು ಎಂದು ಯಲಹಂಕ ಶಾಸಕ ವಿಶ್ವನಾಥ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ