Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ ಅಧಿವೇಶನ: ವಿಪಕ್ಷ ನಾಯಕ ಆರ್ ಅಶೋಕರನ್ನು ಅಸಂತೃಪ್ತ ಶಾಸಕ ಬಸನಗೌಡ ಪಾಟೀಲ್ ಅಭಿನಂದಿಸದೆ ಪಕ್ಷಕ್ಕೆ ಮುಜುಗುರ

ಬೆಳಗಾವಿ ಅಧಿವೇಶನ: ವಿಪಕ್ಷ ನಾಯಕ ಆರ್ ಅಶೋಕರನ್ನು ಅಸಂತೃಪ್ತ ಶಾಸಕ ಬಸನಗೌಡ ಪಾಟೀಲ್ ಅಭಿನಂದಿಸದೆ ಪಕ್ಷಕ್ಕೆ ಮುಜುಗುರ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 04, 2023 | 5:40 PM

Karnataka Assembly Winter Session: ಬಿಜೆಪಿ ಶಾಸಕರಿಗೆ ಸದನದಲ್ಲಿ ಇಂದು ಬಸನಗೌಡ ಪಾಟೀಲ್ ಯತ್ನಾಳ್ ವರ್ತನೆ ಅತಿರೇಕ ಅನಿಸಿರಬಬಹುದು, ಆದರೆ ಅವರ ಸ್ವಭಾವವೇ ಹಾಗೆ, ಯಾರೇನೂ ಮಾಡಲಾಗದು. ಆದರೆ, ತಮ್ಮ ವರ್ತನೆಯಿಂದ ವಿಜಯಪುರ ಶಾಸಕ, ಆಡಳಿತ ಪಕ್ಷದ ಶಾಸಕರಿಗೆ ತಮ್ಮ ಪಕ್ಷವನ್ನು ಟೀಕಿಸಲು ಅವಕಾಶ ಕಲ್ಪಿಸಿಕೊಡುತ್ತಿದ್ದಾರೆ. ಆಧಿವೇಶನ ಮುಗಿಯುವರೆಗೆ ಯತ್ನಾಳ್ ಹಟ ಬಿಡುವುದು ಒಳ್ಳೆಯದು.

ಬೆಳಗಾವಿ: ಸದನದ ಹೊರಗಡೆ ಆಡಿದ ಮಾತುಗಳನ್ನು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಸದನದೊಳಗೆ ಕೃತಿಗೆ ತಂದಿದ್ದಾರೆ. ಬೆಳಗಾವಿ ಚಳಿಗಾಲದ ಮೊದಲ ದಿನವಾದ ಇಂದ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಆರ್ ಅಶೋಕ್ (R Ashoka) ಅವರಿಗೆ ಅಭಿನಂದಿಸಲು ಸಭಾಧ್ಯಕ್ಷ ಯುಟಿ ಖಾದರ್ (Speaker UT Khader) ಅವರು ಯತ್ನಾಳ್ ಹೆಸರು ಕರೆದಾಗ ಅವರು ಎದ್ದುನಿಂತು ಮಾತಾಡುವ ಗೋಜಿಗೆ ಹೋಗಲಿಲ್ಲ. ಯತ್ನಾಳ್ ವರ್ತನೆಯಿಂದ ಕೇವಲ ಅಶೋಕ್ ಮಾತ್ರವಲ್ಲ, ಬಿಜೆಪಿ ಸದಸ್ಯರಿಗೆಲ್ಲ ತೀವ್ರ ಸ್ವರೂಪದ ಮುಜುಗುರ ಉಂಟಾಯಿತು. ಏಸ್ ಟಿ ಸೋಮಶೇಖರ್ ಅಭಿನಂದನೆ ಸಲ್ಲಿಸಿದ ಬಳಿಕ ಸ್ಪೀಕರ್ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಏಕೈಕ ಸದಸ್ಯ ಗಾಲಿ ಜನಾರ್ಧನರೆಡ್ಡಿ ಅವರ ಹೆಸರು ಕರೆದರು. ಅವರ ಬಳಿಕ ಜೆಡಿಎಸ್ ಪಕ್ಷದ ಬಾಲಕೃಷ್ಣ ಮಾತಾಡಿದರು. ಅವರಾದ ಮೇಲೆ ಯತ್ನಾಳ್ ಅವರೇ ಅಂತ ಸಭಾಧ್ಯಕ್ಷರು ಅವರ ಕಡೆ ನೋಡಿದಾಗ ರೆಬೆಲ್ ಶಾಸಕ ಪ್ರತಿಕ್ರಿಯಿಸದೆ ಸುಮ್ಮನೆ ಕೂತುಬಿಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ