ಬೆಳಗಾವಿ ಅಧಿವೇಶನ; ಅಧಿವೇಶನ ಶುರುವಾಗುವ ಮೊದಲೇ ತಮ್ಮ ಪಕ್ಷದ ವಿರುದ್ಧ ಹರಿಹಾಯ್ದ ಬಸನಗೌಡ ಪಾಟೀಲ್ ಯತ್ನಾಳ್

ಬೆಳಗಾವಿ ಅಧಿವೇಶನ; ಅಧಿವೇಶನ ಶುರುವಾಗುವ ಮೊದಲೇ ತಮ್ಮ ಪಕ್ಷದ ವಿರುದ್ಧ ಹರಿಹಾಯ್ದ ಬಸನಗೌಡ ಪಾಟೀಲ್ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 04, 2023 | 1:38 PM

Karnataka Assembly Winter Session 2023: ವಿರೋಧ ಪಕ್ಷದ ನಾಯಕ ಇಲ್ಲವೇ ಪಕ್ಷದ ರಾಜ್ಯಾಧ್ಯಕ್ಷನ ಸ್ಥಾನ-ಎರಡರಲ್ಲಿ ಒಂದು ಉತ್ತರ ಕರ್ನಾಟಕದ ಶಾಸಕನಿಗೆ ಬೇಕೇಬೇಕು ಎಂದು ಹೇಳಿದ ಬಸನಗೌಡ ಪಾಟೀಲ್ ಯತ್ನಾಳ್, ಅದಕ್ಕಾಗಿ ತಾನು ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಹೇಳಿದರು. ಯಾರದೇ ಮುಲಾಜಿಗೆ ಒಳಗಾಗುವ ಅವಶ್ಯಕತೆ ತನಗಿಲ್ಲ ಎಂದು ವಿಜಯಪುರ ಶಾಸಕ ವರಿಷ್ಠರನ್ನು ಕುಟುಕಿದರು.

ಬೆಳಗಾವಿ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರಿಗೆ ಪಕ್ಷದ ಹೈಕಮಾಂಡ್ ವಿರುದ್ಧ ಇರುವ ಅಸಮಾಧಾನ ಕಡಿಮೆಯಾಗುವ ಲಕ್ಷಣಗಳಿಲ್ಲ. ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಲು ಆಗಮಿಸಿದ ಅವರು ಟಿವಿ9 ಕನ್ನಡ ವಾಹಿನಿ ವರದಿಗಾರನೊಂದಿಗೆ ಮಾತಾಡುವಾಗ, ವಿರೋಧಪಕ್ಷದ ನಾಯಕನ (Leader of Opposition) ಸ್ಥಾನವನ್ನು ಹೈಕಮಾಂಡ್ ಅನುಕೂಲಸ್ಥರಿಗೆ ನೀಡಿದೆ, ತನ್ನಂಥ ನಿಷ್ಠಾವಂತ ಕಾರ್ಯಕರ್ತ (loyal party worker) ಅವರಿಗೆ ಬೇಕಿಲ್ಲ ಅಂತ ಹೇಳಿದರು. ವಿಧಾನ ಸಭೆಗೆ ಆಯ್ಕೆಯಾಗಿರುವ ಬಿಜೆಪಿ ಶಾಸಕರ ಪೈಕಿ ತಾನೇ ಎಲ್ಲರಿಗಿಂತ ಸಮರ್ಥ ಮತ್ತು ಯೋಗ್ಯ ಅಂತ ಹೇಳಿದ ಯತ್ನಾಳ್ ಅದ್ಯಾವ ಸರ್ವೇಗಳ ಆಧಾರದ ಮೇಲೆ ಬೇರೆಯವರನ್ನು ಪರಿಗಣಿಸಲಾಗಿದೆಯೋ ಅಂತ ವ್ಯಂಗ್ಯವಾಗಿ ಹೇಳಿದರು. ದೆಹಲಿಗೆ ಹೋದಾಗ ಭೇಟಿ ಮಾಡಲು ಅಪಾಯಿಂಟ್ಮೆಂಟ್ ನೀಡದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮೊದಲ ಬಾರಿಗೆ ತನಗೆ ಫೋನ್ ಮಾಡಿ ಸ್ವಲ್ಪ ದಿನ ಕಾಯುವಂತೆ ಹೇಳಿದ್ದಾರೆ ಎಂದು ಯತ್ನಾಳ್ ಹೇಳಿದರು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ