‘ದರ್ಶನ್ ಪಶ್ಚಾತಾಪದಲ್ಲಿದ್ದಾರೆ, ಮತ್ತೆ ಜೈಲಿಗೆ ಬರಬೇಡಿ ಎಂದರು’; ವಿನೋದ್ ರಾಜ್

|

Updated on: Aug 24, 2024 | 8:06 AM

ವಿನೋದ್ ರಾಜ್ ಅವರು ಇತ್ತೀಚೆಗೆ ದರ್ಶನ್ ಅವರನ್ನು ಜೈಲಲ್ಲಿ ಭೇಟಿ ಆಗಿದ್ದರು. ಆ ಬಳಿಕ ರೇಣುಕಾ ಸ್ವಾಮಿ ಕುಟುಂಬದವರನ್ನೂ ಮೀಟ್ ಮಾಡಿದ್ದರು. ಈಗ ದರ್ಶನ್ ಬಗ್ಗೆ ವಿನೋದ್ ರಾಜ್​ ಅವರು ಮಾತನಾಡಿದ್ದಾರೆ.

ನಟ ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿದ್ದಾರೆ. ಅವರನ್ನು ನೋಡಲು ಅನೇಕ ಸೆಲೆಬ್ರಿಟಿಗಳು ತೆರಳಿದ್ದಾರೆ. ನಟ ವಿನೋದ್ ರಾಜ್ ಕೂಡ ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿದ್ದರು. ದರ್ಶನ್ ಬಗ್ಗೆ ವಿನೋದ್ ರಾಜ್ ಮಾತನಾಡಿದ್ದಾರೆ. ‘ದರ್ಶನ್​ಗೆ ಹೆಚ್ಚು ಪ್ರೀತಿ-ಅನುಕಂಪ ಇದೆ. ನನ್ನ ತಾಯಿಗೆ ಅನಾರೋಗ್ಯ ಆದಾಗ ಅವರು ಬಂದಿದ್ದರು. ಕಾಲಿಗೆ ಬಿದ್ದಿದ್ದರು. ಅವರು ಕೊಡುವ ಗೌರವ ಅಪಾರ. ಕಾರಾಗೃಹಕ್ಕೆ ಹೋದಾಗ ನನ್ನ ನೋಡಿ ಅತ್ತರು. ಕಲಾವಿದರಿಗೆ ಈ ರೀತಿ ಪರಿಸ್ಥಿತಿ ಬರಬಾರದಿತ್ತು. ನಿತ್ಯ ನಾವು ಏನು ಮಾಡುತ್ತಿದ್ದೇವೆ ಅನ್ನೋದೇ ಅರ್ಥ ಆಗುತ್ತಿಲ್ಲ. ಮೇಲೆ ದೇವರನ್ನು ನೋಡಿ ಕೆಳಗೆ ನೋಡಿದಾಗ ಈ ರೀತಿಯ ದೃಶ್ಯಗಳು ಕಾಣುತ್ತವೆ. ದರ್ಶನ್ ತುಂಬಾ ಪಶ್ಚಾತಾಪದಲ್ಲಿದ್ದಾರೆ. ಅಣ್ಣ ನೀನು ಜೈಲಿಗೆ ಬರಬೇಡ, ನಿನ್ನತ್ರ ನಾನೇ ಬರ್ತೀನಿ ಎಂದಿದ್ದಾರೆ’ ಎಂಬುದಾಗಿ ಮಾತನಾಡುತ್ತಾ ಕಣ್ಣೀರು ಹಾಕಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.