ಮತ್ತೊಂದು ಸಾವಿಗೆ ಕಾರಣವಾದ ದರ್ಶನ್; ಕುಟುಂಬದವರ ಆಕ್ರೋಶ

|

Updated on: Jun 15, 2024 | 8:12 AM

ದರ್ಶನ್ ಸಹಚರ ಎನ್ನಲಾದ ಚಿತ್ರದುರ್ಗದ ಅನುಕುಮಾರ್​ ಕೂಡ ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಈ ವಿಚಾರ ಕೇಳಿ ಅನುಕುಮಾರ್ ತಂದೆ ಚಂದ್ರಣ್ಣ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಬಗ್ಗೆ ಅನುಕುಮಾರ್ ಚಿಕ್ಕಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ‘

ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ ರೇಣುಕಾ ಸ್ವಾಮಿ ಕೊಲೆ ಆಗಿದ್ದಾರೆ. ಈ ಕೇಸ್​ನಲ್ಲಿ ದರ್ಶನ್ ಸೇರಿ ಅನೇಕರು ಅರೆಸ್ಟ್ ಆಗಿದ್ದಾರೆ. ದರ್ಶನ್ (Darshan) ಸಹಚರ ಎನ್ನಲಾದ ಚಿತ್ರದುರ್ಗದ ಅನುಕುಮಾರ್​ ಕೂಡ ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಈ ವಿಚಾರ ಕೇಳಿ ಅನುಕುಮಾರ್ ತಂದೆ ಚಂದ್ರಣ್ಣ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಬಗ್ಗೆ ಅನುಕುಮಾರ್ ಚಿಕ್ಕಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ‘ನನ್ನ ಅಣ್ಣನ ಸಾವಿಗೆ ದರ್ಶನ್ ಕಾರಣ. ಅವರೊಬ್ಬರೇ ಮಾಡಿದ್ದರೆ ಆಗ್ತಿತ್ತು. 16 ಜನರನ್ನು ಇಟ್ಟುಕೊಂಡು ಮಾಡೋದು ಬೇಕಿರಲಿಲ್ಲ. ಇಲ್ಲಿ ಬಡವರೇ ಸಾಯೋದು. ಅವನು ಇಲ್ಲಿದ್ದಿದ್ದರೆ ಚೆನ್ನಾಗಿ ಇರುತ್ತಿತ್ತು’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on