ದರ್ಶನ್ ಪ್ರಕರಣದ ತನಿಖೆಗೆ ಈವರೆಗೆ ಖರ್ಚಾದ ಹಣ ಎಷ್ಟು?

|

Updated on: Aug 22, 2024 | 8:06 AM

ನಟ ದರ್ಶನ್​ ಅವರು ಕೊಲೆ ಆರೋಪದಲ್ಲಿ ಜೈಲು ಸೇರಿದ್ದು, ದಿನದಿಂದ ದಿನಕ್ಕೆ ಅವರಿಗೆ ಸಂಕಷ್ಟ ಹೆಚ್ಚಾಗುತ್ತಿದೆ. ರೇಣುಕಾ ಸ್ವಾಮಿ ಮರ್ಡರ್​ ಕೇಸ್​ನಲ್ಲಿ ದರ್ಶನ್​ ಎರಡನೇ ಆರೋಪಿ ಆಗಿದ್ದಾರೆ. ಈವರೆಗೆ ಪ್ರಕರಣದ ತನಿಖೆಗೆ ಪೊಲೀಸರು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ.

ನಟ ದರ್ಶನ್ ಅವರ ಪ್ರಕರಣದ ತನಿಖೆ ಭರದಿಂದ ಸಾಗುತ್ತಿದೆ. ಶೀಘ್ರವೇ ಪೊಲೀಸರು ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಅಲ್ಲಿವರೆಗೆ ದರ್ಶನ್​ಗೆ ಜೈಲೇ ಗತಿ ಆಗಲಿದೆ. ಆ ಬಳಿಕ ದರ್ಶನ್ ಅವರು ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಲಿದ್ದಾರೆ. ಈ ಮಧ್ಯೆ ದರ್ಶನ್ ಅವರನ್ನು ಎ2 ಆರೋಪಿ ಸ್ಥಾನದಿಂದ ಎ1 ಆರೋಪಿಯನ್ನಾಗಿ ಮಾಡಲು ಸಿದ್ಧತೆ ನಡೆದಿದೆ. ಈವರೆಗೆ ಪ್ರಕರಣದ ತನಿಖೆಗೆ ಎಷ್ಟು ಹಣ ಖರ್ಚಾಗಿದೆ ಎಂಬ ಮಾಹಿತಿ ಸಿಕ್ಕಿದೆ. ತನಿಖೆಗೆ ಈವರೆಗೆ 2 ಲಕ್ಷದ 50 ಸಾವಿರ ರೂಪಾಯಿ ಖರ್ಚಾಗಿದೆ. ಈ ಹಣವನ್ನು ಸರ್ಕಾರ ಪೊಲೀಸರಿಗೆ ಪಾವತಿ ಮಾಡಿರಲಿಲ್ಲ. ಈ ಬಗ್ಗೆ ಟಿವಿ9 ಕನ್ನಡ ವರದಿ ಮಾಡಿತ್ತು. ಈ ಬೆನ್ನಲ್ಲೇ ಎಚ್ಚೆತ್ತಿರೋ ಸರ್ಕಾರ ಬಿಲ್​ಗಳನ್ನು ಕ್ಲಿಯರ್ ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.