ದರ್ಶನ್ ಸೆಲಿಬ್ರಿಟಿಯಾಗಿರುವುದರಿಂದ ಕೈದಿಗಳೂ ಮಾತಾಡಲು ಹಾತೊರೆಯುತ್ತಾರೆ: ಉಮೇಶ್ ಬಣಕಾರ್
ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಹಿಂದಿನ ಕಾನೂನು ಪ್ರಕ್ರಿಯೆಗಳು ಏನು ಅಂತ ಗೊತ್ತಿಲ್ಲ, ಅದರೆ ರೌಡಿಗಳೊಂದಿಗೆ ಕಾಫಿ ಕುಡಿಯುತ್ತಿರುವ ಕಾರಣಕ್ಕೆ ಶಿಫ್ಟ್ ಮಾಡುತ್ತಾರೆಂದರೆ ಅದು ತಪ್ಪು, ಸರ್ಕಾರ ತನ್ನ ವೈಫಲ್ಯವನ್ನು ದರ್ಶನ್ ಮೇಲೆ ಹೇರಕೂಡದು ಅಂತ ಉಮೇಶ್ ಬಣಕಾರ್ ಹೇಳಿದರು.
ಬೆಂಗಳೂರು: ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿರುವ ಉಮೇಶ್ ಬಣಕಾರ್, ಚಿತ್ರನಟ ದರ್ಶನ್ ಜೈಲಿನಲ್ಲಿ ಬೇರೆ ಕೊಲೆ ಆರೋಪಿಗಳ ಜೊತೆ ಕಾಫಿ ಹೀರುತ್ತಾ ಮಾತಾಡುತ್ತಿರವುದರಲ್ಲಿ ಯಾವುದೇ ತಪ್ಪಿಲ್ಲ, ಅವರೊಬ್ಬ ಸೆಲಿಬ್ರಿಟಿಯಾಗಿರುವುದರಿಂದ ಜೈಲಲ್ಲಿದ್ದ ಕೈದಿಗಳು ಅವರನ್ನು ಸುತ್ತವರಿದಿದ್ದಾರೆ ಮತ್ತು ಅವರೊಂದಿಗೆ ಮಾತಾಡಲು, ಮತ್ತು ಸಮಯ ಕಳೆಯಲು ಬಯಸಿರುತ್ತಾರೆ, ಅದನ್ನು ಯಾವನೋ ಒಬ್ಬ ಫೋಟೋ ತೆಗೆದು ದುಡ್ಡಿಗಾಗಿ ಮಾಧ್ಯಮವದರಿಗೆ ಮಾರಿಕೊಂಡಿರುತ್ತಾನೆ, ದರ್ಶನ್ ಗೆ ಅಲ್ಲೂ ನಂಬಿಕೆದ್ರೋಹ ಎನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದರ್ಶನ್ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಹಿಂದೆ ರಾಜಕೀಯ ಉದ್ದೇಶವಿಲ್ಲ: ಎನ್ ಎಸ್ ಬೋಸರಾಜು