ಥಿಯೇಟರ್‌ಗಳಲ್ಲಿ ‘ಡೆವಿಲ್’ ಅಬ್ಬರ; ಮುಗಿಲುಮುಟ್ಟಿದ ದರ್ಶನ್ ಫ್ಯಾನ್ಸ್ ಸಂಭ್ರಮ
ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಇಂದು (ಡಿಸೆಂಬರ್) ವಿಶ್ವಾದ್ಯಂತ ರಿಲೀಸ್ ಆಗಿದೆ. ಈ ಚಿತ್ರಕ್ಕೆ ಎಲ್ಲ ಕಡೆಗಳಲ್ಲಿ ಒಳ್ಳೆಯ ಓಪನಿಂಗ್ ಸಿಕ್ಕಿದೆ. ಈ ಸಿನಿಮಾ ಅಭಿಮಾನಿಗಳ ಪಾಲಿಗೆ ಸಖತ್ ವಿಶೇಷವಾಗಿದೆ. ಥಿಯೇಟರ್‌ಗಳಲ್ಲಿ ಫ್ಯಾನ್ಸ್ ಸಂಭ್ರಮ ಮುಗಿಲು ಮುಟ್ಟಿದೆ. ಅಭಿಮಾನಿಗಳು ಸಿಳ್ಳೆ ಹೊಡೆದು ಚಿತ್ರವನ್ನು ಸ್ವಾಗತಿಸಿದ್ದಾರೆ.
ಡೆವಿಲ್ ಸಿನಿಮಾ ಇಂದು ವಿಶ್ವಾದ್ಯಂತ ತೆರೆಗೆ ಬಂದಿದೆ. ದರ್ಶನ್ ಅಭಿಮಾನಿಗಳಿಗೆ ಇಂದು ಹಬ್ಬವೇ ಸರಿ. ಎಲ್ಲ ಕಡೆಗಳಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ಮುಂಜಾನೆ 6.30ರಿಂದ ಶೋಗಳು ಆರಂಭ ಆಗಿವೆ. ಎಲ್ಲಾ ಶೋಗಳು ಹೌಸ್ಫುಲ್ ಆಗಿವೆ. ಮಲ್ಟಿಪ್ಲೆಕ್ಸ್ಗಳಲ್ಲಿಯೂ ಸಿನಿಮಾನ ದೊಡ್ಡ ಸಂಖ್ಯೆಯಲ್ಲಿ ವೀಕ್ಷಣೆ ಮಾಡುತ್ತಿದ್ದಾರೆ. ಚಿತ್ರದ ಸೆಲಬ್ರೇಷನ್ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Dec 11, 2025 06:57 AM
