‘ಅದೃಷ್ಟ ದೇವತೆ ಬಟ್ಟೆ ಬಿಚ್ಚಿಸಿ ​ರೂಂನಲ್ಲಿ ಮಲಗಿಸ್ತೀನಿ ಎಂದವರು ದೇವರಿಗೆ ವಂದಿಸ್ತಾರೆ’; ಪ್ರಥಮ್

Updated on: Jul 31, 2025 | 2:16 PM

ದರ್ಶನ್ ಫ್ಯಾನ್ಸ್ vs ಪ್ರಥಮ್ ಎಂಬಂಥ ಪರಿಸ್ಥಿತಿ ನಿರ್ಮಾಣ ಆಗಿದೆ. ದರ್ಶನ್ ಫ್ಯಾನ್ಸ್ ತಮ್ಮ ಮೇಲೆ ಹಲ್ಲೆ ಮಾಡಿದ್ದಾಗಿ ಪ್ರಥಮ್ ಸೋಶಿಯಲ್ ಮೀಡಿಯಾದಲ್ಲಿ ಆರೋಪಿಸಿದ್ದಾರೆ. ಈಗ ಪ್ರಥಮ್ ಒಂದು ಪ್ರಶ್ನೆ ಕೇಳಿದ್ದಾರೆ. ಅದೃಷ್ಟದೇವತೆ ಬಟ್ಟೆ ಬಿಚ್ಚಿಸಿ ಬೆಡ್​ರೂಂನಲ್ಲಿ ಮಲಗಸ್ತೀನಿ ಎಂದವರು ಈಗ ದೇವಸ್ಥಾನಕ್ಕೆ ಹೋಗಿದ್ದಾರೆ ಎಂದಿದ್ದಾರೆ.

ದರ್ಶನ್ ಹಾಗೂ ವಿಜಯಲಕ್ಷ್ಮಿ (Vijayalkshmi) ಅವರು ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ವಿಚಾರದ ಬಗ್ಗೆ ಪ್ರಥಮ್ ಮಾತನಾಡಿದ್ದಾರೆ. ಈ ಮೊದಲು ಸಂದರ್ಶನ ಒಂದರಲ್ಲಿ ಮಾತನಾಡುವಾಗ ದರ್ಶನ್ ಎಡವಟ್ಟೊಂದನ್ನು ಮಾಡಿಕೊಂಡಿದ್ದರು. ‘ಅದೃಷ್ಟದೇವತೆ ಬಂದರೆ ಅದರ ಬಟ್ಟೆ ಬಿಚ್ಚಿಸಿ ರೂಂನಲ್ಲಿ ಕೂಡಿ ಹಾಕಬೇಕು. ಆಗ ಅದು ಎಲ್ಲಿಯೂ ಹೋಗಲ್ಲ’ ಎಂಬರ್ಥದಲ್ಲಿ ಮಾತನಾಡಿದ್ದರು. ಈ ವಿಚಾರವನ್ನು ಪ್ರಥಮ್ ಉಲ್ಲೇಖಿಸಿದ್ದಾರೆ. ‘ದರ್ಶನ್ ಕಾಮಾಕ್ಯ ದೇವಸ್ಥಾನಕ್ಕೆ ಹೋಗಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಈ ಮೊದಲು ಅದೃಷ್ಟ ಲಕ್ಷ್ಮಿ ಬಂದರೆ ಬಟ್ಟೆ ಬಿಚ್ಚಿಸಿ ರೂಂನಲ್ಲಿ ಕೂಡಿ ಹಾಕ್ತಿನಿ ಎಂದವರು ಈಗ ಹೋಗಿ ಕಾಮಾಕ್ಯ ದೇವರಿಗೆ ವಂದಿಸುತ್ತಿದ್ದಾರೆ’ ಎಂದಿದ್ದಾರೆ ಪ್ರಥಮ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jul 31, 2025 11:06 AM