ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ 17 ವ್ಯಕ್ತಿಗಳ ಬಂಧನವಾಗಿದೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದ ಹಲವರ ವಿಚಾರಣೆ ಸಹ ಮಾಡಲಾಗಿದೆ. ಇಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿಕ್ ಪುರೋಹಿತ್ ಎಂಬಾತನ ವಿಚಾರಣೆ ಮಾಡಲಾಗಿದೆ. ಈತ ಶಾಸಕರೊಬ್ಬರಿಗೆ ಆಪ್ತ ಎನ್ನಲಾಗುತ್ತಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಸೇರಿದಂತೆ 17 ಮಂದಿಯ ಬಂಧನವಾಗಿದೆ. ಮಾತ್ರವಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರ ವಿಚಾರಣೆ ನಡೆಸಲಾಗುತ್ತಿದೆ. ನಿನ್ನೆ ದರ್ಶನ್ಗೆ ಹಣ ಕೊಟ್ಟ ಮಾಜಿ ಮೇಯರ್ ವಿಚಾರಣೆ ನಡೆಸಲಾಯ್ತು, ‘ಡೆವಿಲ್’ ಸಿನಿಮಾ ನಿರ್ದೇಶಕ ಪ್ರಕಾಶ್ ವಿಚಾರಣೆ ಮಾಡಲಾಗಿತ್ತು. ಇಂದು ಬೆಂಗಳೂರಿನ ಶಾಸಕರೊಬ್ಬರ ಆಪ್ತ ಎನ್ನಲಾಗುತ್ತಿರುವ ಕಾರ್ತಿಕ್ ಪುರೋಹಿತ್ ಎಂಬಾತನ ವಿಚಾರಣೆ ಮಾಡಲಾಯ್ತು. ಬಸವೇಶ್ವರ ಪೊಲೀಸ್ ಠಾಣೆಗೆ ಕರೆಸಿಕೊಂಡು ಎಸಿಪಿ ಚಂದನ್ ಅವರು ಕಾರ್ತಿಕ್ ಪುರೋಹಿತ್ ಅನ್ನು ವಿಚಾರಣೆ ಮಾಡಿದರು. ನಾಳೆ ಸಹ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದಾರೆ. ವಿಚಾರಣೆ ಬಳಿಕ ಕಾರ್ತಿಕ್, ಮಾಧ್ಯಮಗಳ ಬಳಿ ಮಾಹಿತಿ ಹಂಚಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
