ದರ್ಶನ್ಗೆ ಜೈಲಿನಿಂದ ಮುಕ್ತಿ ಸಿಗಲೆಂದು ಪ್ರಾರ್ಥಿಸಿದ ಅಭಿಮಾನಿಗಳು
ರೇಣುಕಾ ಸ್ವಾಮಿ ಕೊಲೆ ಪ್ರಕರಣದಿಂದ ಜೈಲು ಸೇರಿರುವ ದರ್ಶನ್ ತೂಗುದೀಪ ಅವರ ಪರವಾಗಿ ಅವರ ಅಭಿಮಾನಿಗಳು ದೇವಾಲಯದಲ್ಲಿ ಅವರ ಹೆಸರಲ್ಲಿ ವಿಶೇಷ ಪೂಜೆ ಮಾಡಿಸಿ, ತಮ್ಮ ಮೆಚ್ಚಿನ ನಟ ಬೇಗ ಬಿಡುಗಡೆ ಆಗಬೇಕೆಂದು ಪ್ರಾರ್ಥಿಸಿದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿ ಒಂದು ತಿಂಗಳಿಗೂ ಹೆಚ್ಚು ಸಮಯ ಆಗಿದೆ. ದರ್ಶನ್ ಸದ್ಯಕ್ಕೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ ಕಾಲ ಕಳೆಯುತ್ತಿದ್ದಾರೆ. ಹೊರಗೆ ಅಭಿಮಾನಿಗಳು ತಮ್ಮ ಮೆಚ್ಚಿನ ನಟ ಬೇಗನೆ ಜೈಲಿನಿಂದ ಬಿಡುಗಡೆ ಆಗಿ ಬರಲಿ, ದರ್ಶನ್ಗೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಶಿಕ್ಷೆ ಆಗದಿರಲಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಇಂದು (ಜುಲೈ 14) ದರ್ಶನ್ರ ಕೆಲವು ಅಭಿಮಾನಿಗಳು ದರ್ಶನ್ರ ಹೊಸ ಸಿನಿಮಾ ‘ಡೆವಿಲ್’ ಪೋಸ್ಟರ್ಗಳನ್ನು ಹಿಡಿದುಕೊಂಡು ದೇವರ ಮುಂದೆ ನಿಂತು ತಮ್ಮ ಮೆಚ್ಚಿನ ನಟ ಬೇಗನೆ ಬಿಡುಗಡೆ ಆಗಬೇಕು ಎಂದು ಬೇಡಿಕೊಂಡರು. ದರ್ಶನ್ ಹೆಸರಲ್ಲಿ ವಿಶೇಷ ಪೂಜೆಯನ್ನು ಸಹ ದರ್ಶನ್ರ ಅಭಿಮಾನಿಗಳು ಮಾಡಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jul 14, 2024 04:22 PM