ಸಿನಿಮಾ ಹಿಟ್​ ಆಗೋದು, ಬಿಡೋದು ಯಾವಾಗ? ವಿವರಿಸಿದ ಉಮಾಪತಿ ಗೌಡ

ಸಿನಿಮಾ ಹಿಟ್​ ಆಗೋದು, ಬಿಡೋದು ಯಾವಾಗ? ವಿವರಿಸಿದ ಉಮಾಪತಿ ಗೌಡ

ಮದನ್​ ಕುಮಾರ್​
|

Updated on: Jul 14, 2024 | 4:37 PM

ಕನ್ನಡದಲ್ಲಿ ಇತ್ತೀಚೆಗೆ ಬಿಡುಗಡೆ ಅದ ಯಾವುದೇ ಸಿನಿಮಾ ಕೂಡ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಂಡಿಲ್ಲ. ಸ್ಟಾರ್​ ಸಿನಿಮಾಗಳ ಕೊರತೆ ಕಾಣಿಸಿದೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಖ್ಯಾತ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಅವರು ಮಾತನಾಡಿದ್ದಾರೆ. ಒಂದು ಸಿನಿಮಾ ಹಿಟ್​ ಆಗೋದು ಯಾವಾಗ ಎಂಬುದನ್ನು ಅವರು ವಿವರಿಸಿದ್ದಾರೆ. ಉಮಾಪತಿ ಗೌಡ ಮಾತನಾಡಿದ ವಿಡಿಯೋ ಇಲ್ಲಿದೆ ನೋಡಿ..

ಬೇರೆ ಹೀರೋಗಳ ಸಿನಿಮಾವನ್ನು ನೋಡಬೇಡಿ ಎಂದು ಓರ್ವ ನಟನ ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ಹುನ್ನಾರ ಮಾಡುತ್ತಿದ್ದಾರೆ. ಈ ಬಗ್ಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರು ತಮ್ಮ ಪ್ರತಿಕ್ರಿಯೆ ತಿಳಿಸಿದ್ದಾರೆ. ‘ಚಿತ್ರರಂಗದ ಯಜಮಾನಿಕೆಯನ್ನು ವಹಿಸಲು ಯಾರಿಂದಲೂ ಸಾಧ್ಯವಿಲ್ಲ. ತಲೆಮಾರುಗಳಿಂದ ಒಳ್ಳೆಯ ವ್ಯಕ್ತಿಗಳು ಕಟ್ಟಿ ಬೆಳೆಸಿದ ಇಂಡಸ್ಟ್ರಿ ಇದು. ಕೆಟ್ಟ ಸೀಸನ್​, ಒಳ್ಳೆಯ ಸೀಸನ್​ ಅಂತ ಬರುತ್ತದೆ. ಇಷ್ಟು ದಿನ ಚುನಾವಣೆ, ಐಪಿಎಲ್​ ಇತ್ತು. ಸಿನಿಮಾರಂಗದಲ್ಲಿ ಏಳು-ಬೀಳು ಇರುತ್ತದೆ. ಒಳ್ಳೆಯ ಮಳೆ-ಬೆಳೆ ಆದಾಗ ರೈತರ ಕೈಯಲ್ಲಿ ದುಡ್ಡು ಇದ್ದರೆ ಮಾರ್ಕೆಟ್​ನಲ್ಲಿ ದುಡ್ಡು ಓಡಾಡುತ್ತದೆ. ಆಗ ಸಿನಿಮಾಗಳು ಚೆನ್ನಾಗಿ ಓಡುತ್ತವೆ. ಅದನ್ನು ಹೊರತುಪಡಿಸಿ ಅವರ ಸಿನಿಮಾ ನೋಡಬೇಡಿ, ಇವರ ಸಿನಿಮಾ ನೋಡಬೇಡಿ ಅಂತ ಯಾರೂ ತೀರ್ಮಾನ ಮಾಡೋಕೆ ಆಗಲ್ಲ’ ಎಂದು ಉಮಾಪತಿ ಶ್ರೀನಿವಾಸ್​ ಗೌಡ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.