ಮಂಡ್ಯದಲ್ಲಿ ಕುಮಾರಣ್ಣ ಅಭಿಮಾನಿಗಳಿಗೆ ಭರ್ಜರಿ ಬಾಡೂಟ; 5 ಟನ್ ಮಟನ್, 2 ಟನ್ ಚಿಕನ್
ಇಂದು(ಭಾನುವಾರ) ಮಂಡ್ಯದ ಪಾಂಡವಪುರ(Pandavapura) ಪಟ್ಟಣದಲ್ಲಿ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಅವರಿಗೆ ಅಭಿನಂದನೆ ಹಾಗೂ ಕೃತಜ್ಞತಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ರೋಬ್ಬರಿ 5 ಟನ್ ಮಟನ್, 2.5 ಟನ್ ಚಿಕನ್, ಬೋಟಿ, 1 ಲಕ್ಷ ಮೊಟ್ಟೆಯಿಂದ ಬಗೆ ಬಗೆಯ ಪದ್ದಾರ್ಥವನ್ನು ತಯಾರಿಸಲಾಗಿದೆ.
ಮಂಡ್ಯ, ಜು.14: ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಅವರಿಗೆ ಅಭಿನಂದನೆ ಹಾಗೂ ಕೃತಜ್ಞತಾ ಸಮಾವೇಶವನ್ನು ಇಂದು(ಭಾನುವಾರ) ಮಂಡ್ಯದ ಪಾಂಡವಪುರ(Pandavapura) ಪಟ್ಟಣದಲ್ಲಿ ಆಯೋಜನೆ ಮಾಡಲಾಗಿತ್ತು. ಈ ಹಿನ್ನಲೆ ಮೇಲುಕೋಟೆ ಕ್ಷೇತ್ರದ ಮತದಾರರಿಗೆ ಭರ್ಜರಿ ಬಾಡೂಟ ವ್ಯವಸ್ಥೆ ಮಾಡಲಾಗಿದ್ದು, ಪಾಂಡವಪುರ ಕ್ರೀಡಾಂಗಣ ಸಮೀಪ ಬೃಹತ್ ವೇದಿಕೆ ನಿರ್ಮಿಸಲಾಗಿತ್ತು. ಜೊತೆಗೆ ವೇದಿಕೆ ಕಾರ್ಯಕ್ರಮ ಸಮೀಪದ ಖಾಸಗಿ ಸಮುದಾಯ ಭವನದಲ್ಲಿ ಊಟದ ವ್ಯವಸ್ಥೆ ಕೂಡ ಮಾಡಲಾಗಿದ್ದು, ಇನ್ನು ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಬಂದಿದ್ದ ಕುಮಾರಣ್ಣನ ಅಭಿಮಾನಿಗಳು ಭರ್ಜರಿ ಬಾಡೂಟ ಸವಿಯುತ್ತಿದ್ದಾರೆ. ಬರೋಬ್ಬರಿ 5 ಟನ್ ಮಟನ್, 2.5 ಟನ್ ಚಿಕನ್, ಬೋಟಿ, 1 ಲಕ್ಷ ಮೊಟ್ಟೆಯಿಂದ ಬಗೆ ಬಗೆಯ ಪದ್ದಾರ್ಥವನ್ನು ತಯಾರಿಸಲಾಗಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

