ಪೋಷಕರೇ ಎಚ್ಚರ... ಡೈರಿ ಮಿಲ್ಕ್​ ಚಾಕೋಲೇಟ್​ನಲ್ಲಿ ಮತ್ತೆ ಹುಳುಗಳು ಪತ್ತೆ..!

ಪೋಷಕರೇ ಎಚ್ಚರ… ಡೈರಿ ಮಿಲ್ಕ್​ ಚಾಕೋಲೇಟ್​ನಲ್ಲಿ ಮತ್ತೆ ಹುಳುಗಳು ಪತ್ತೆ..!

TV9 Web
| Updated By: ಝಾಹಿರ್ ಯೂಸುಫ್

Updated on:Jul 15, 2024 | 3:21 PM

ಫೆಬ್ರವರಿ ತಿಂಗಳಲ್ಲಿ ಹೈದರಾಬಾದ್​ನ ಗ್ರಾಹಕರೊಬ್ಬರು ಖರೀದಿಸಿದ ಡೈರಿ ಮಿಲ್ಕ್ ಚಾಕೋಲೇಟ್​ನಲ್ಲಿ ಹುಳುಗಳು ಪತ್ತೆಯಾಗಿದ್ದವು. ಇದೀಗ ಮಡಿಕೇರಿಯ ವ್ಯಕ್ತಿಯೊಬ್ಬರು ಖರೀದಿಸಿದ ಕ್ಯಾಡ್​ಬರಿ ಸಿಲ್ಕ್ ಹ್ಯಾಝಲ್​ನೆಟ್​ ಚಾಕೋಲೇಟ್​ನಲ್ಲಿ ಹುಳುಗಳು ಕಂಡು ಬಂದಿವೆ. ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾ ಹಂಚಿಕೊಳ್ಳಲಾಗಿದ್ದು, ಈ ಬಗ್ಗೆ ಪೋಷಕರು ಎಚ್ಚರಿವಹಿಸುವಂತೆ ಸೂಚಿಸಿದ್ದಾರೆ.

ಪೋಷಕರೇ ಎಚ್ಚರ… ನೀವು ಮಕ್ಕಳಿಗೆ ಪ್ರೀತಿಯಿಂದ ನೀಡುವ ಚಾಕೋಲೇಟ್​ಗಳೇ ಅವರ ಜೀವಕ್ಕೆ ಕುತ್ತು ತರಬಹುದು. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಕ್ಯಾಡ್​ಬರಿ ಡೈರಿ ಮಿಲ್ಕ್​ ಚಾಕೋಲೇಟ್​ಗಳಲ್ಲಿ ಹುಳುಗಳು ಪತ್ತೆಯಾಗುತ್ತಿರುವ ಸುದ್ದಿಗಳು ಆಗ್ಗಾಗ್ಗೆ ಕೇಳಿ ಬರುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಹೈದರಾಬಾದ್​ನ ಗ್ರಾಹಕರೊಬ್ಬರು ಡೈರಿ ಮಿಲ್ಕ್​ ಚಾಕೋಲೇಟ್​ನಲ್ಲಿ ಹುಳುಗಳಿರುತ್ತವೆ ಎಂದು ಎಚ್ಚರಿಸಿದ್ದರು. ಇದೀಗ ಮಡಿಕೇರಿಯ ಸುಲ್ತಾನ್ ಎಂಬವರು ಖರೀದಿಸಿದ ಡೈರಿ ಮಿಲ್ಕ್ ಸಿಲ್ಕ್ (ಹ್ಯಾಝಲ್​ನಟ್) ಚಾಕೋಲೇಟ್​ನಲ್ಲಿ ಹುಳುಗಳು ಕಂಡು ಬಂದಿವೆ.

ಮಕ್ಕಳಿಗೆಂದು ಖರೀದಿಸಿದ ಈ ಚಾಕೋಲೇಟ್​ ಅನ್ನು ಓಪನ್ ಮಾಡಿದಾಗ ಅದರಲ್ಲಿನ ಹ್ಯಾಝೆಲ್​ನಟ್​ಗಳಿಂದ ಹುಳುಗಳು ಹೊರಬರುತ್ತಿರುವುದು ಕಂಡು ಬಂದಿದೆ. ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಪೋಷಕರು ಈ ಬಗ್ಗೆ ಎಚ್ಚರವಹಿಸುವಂತೆ ಸೂಚಿಸಿದ್ದಾರೆ. ಏಕೆಂದರೆ ಈ ಚಾಕೋಲೇಟ್​ನ ಎಕ್ಸ್​ಪೈರಿ ಡೇಟ್ 22-1-2025 ಇದ್ದು, ಇದಾಗ್ಯೂ ಚಾಕೋಲೇಟ್​ನಲ್ಲಿನ ಡ್ರೈ ಫ್ರೂಟ್​ನಲ್ಲಿ ಹುಳುಗಳು ಪತ್ತೆಯಾಗಿವೆ.

ಇದಕ್ಕೂ ಮುನ್ನ ಹೈದರಾಬಾದ್​ನ ರಾಬಿನ್ ಎನ್ನುವವರು ಖರೀದಿಸಿದ ಡೈರಿ ಮಿಲ್ಕ್ ಚಾಕೋಲೇಟ್​ನಲ್ಲೂ ಹುಳ ಪತ್ತೆಯಾಗಿತ್ತು. ಈ ಚಾಕೋಲೇಟ್ ಅನ್ನು ಅವರು ತೆಲಂಗಾಣ ರಾಜ್ಯ ಆಹಾರ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ್ದರು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ, 2006 ರ ಸೆಕ್ಷನ್ 3 (zz) (iii) (ix) ಅಡಿಯಲ್ಲಿ ಅಸುರಕ್ಷಿತವೆಂದು ಪರಿಗಣಿಸಲಾಗಿದೆ ಎಂದು ಪ್ರಯೋಗಾಲಯದ ವರದಿ ಹೇಳಿತ್ತು.

ಈ ವರದಿಯನ್ನು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಎಕ್ಸ್​ನಲ್ಲಿ ಟ್ಯಾಗ್ ಮಾಡಿದ್ದ ರಾಬಿನ್, ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಚಾಕೊಲೇಟ್​ ಅಚ್ಚುಮೆಚ್ಚು. ಹೀಗಿರುವಾಗ ಅವರ ಆರೋಗ್ಯದ ಗತಿ ಏನು ಎಂದು ಕಳವಳ ವ್ಯಕ್ತಪಡಿಸಿದ್ದರು. ಇದೀಗ ಮತ್ತೊಮ್ಮೆ ಡೈರಿ ಮಿಲ್ಕ್ ಚಾಕೋಲೇಟ್​ನಲ್ಲಿ ಹುಳುಗಳು ಪತ್ತೆಯಾಗಿರುವುದರಿಂದ, ಪೋಷಕರು ಮಕ್ಕಳಿಗೆ ಚಾಕೋಲೇಟ್ ನೀಡುವ ಮುನ್ನ ಎಚ್ಚರವಹಿಸಲೇಬೇಕು.

 

 

Published on: Jul 14, 2024 01:54 PM