ಜೈಲಲ್ಲಿ ಮಗನ ತಬ್ಬಿ ಹಗುರಾದ ದರ್ಶನ್; ಪತ್ನಿ ವಿಜಯಲಕ್ಷ್ಮೀ ಭಾವುಕ
ವಿಜಯಲಕ್ಷ್ಮೀ ಅವರು ಇತ್ತೀಚೆಗೆ ಕೊಲ್ಲೂರಿಗೆ ತೆರಳಿದ್ದರು. ಮೂಕಾಂಬಿಕಾ ದೇವಿಯ ಎದುರು ವಿಶೇಷ ಪೂಜೆಯನ್ನು ಅವರು ಮಾಡಿಸಿದ್ದರು. ಅಲ್ಲದೆ ನವ ಚಂಡಿಕಾ ಹೋಮವನ್ನು ಕೂಡ ಮಾಡಿಸಲಾಗಿತ್ತು. ಪೂಜೆಯ ಸಂದರ್ಭದಲ್ಲಿ ತೆಗೆದುಕೊಂಡು ಬಂದ ಪ್ರಸಾದವನ್ನು ಜೈಲಿಗೆ ತಂದಿದ್ದಾರೆ ವಿಜಯಲಕ್ಷ್ಮೀ.
ಜೈಲಿನಲ್ಲಿರೋ ದರ್ಶನ್ಗೆ ಅಲ್ಲಿನ ಜೀವನ ಸಾಕಾಗಿ ಹೋಗಿದೆ. ಜೈಲಿನ ಊಟ ಸೇರುತ್ತಿಲ್ಲ. ಬ್ಯಾಂಕ್ ಬ್ಯಾಲೆನ್ಸ್ ಕೋಟಿ ಕೋಟಿ ಇದ್ದರೂ ಅದು ಪ್ರಯೋಜನಕ್ಕೆ ಬರುತ್ತಿಲ್ಲ. ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಯಾಕಾದರೂ ಸಿಲುಕಿಕೊಂಡೆನೋ ಎನ್ನುವ ಪಶ್ಚಾತಾಪ ಅವರನ್ನು ಬಹುವಾಗಿ ಕಾಡುತ್ತಿದೆ. ಈ ಮಧ್ಯೆ ದರ್ಶನ್ನ ಭೇಟಿ ಮಾಡಲು ಅವರ ಪತ್ನಿ ವಿಜಯಲಕ್ಷ್ಮೀ, ಮಗ ವಿನೀಶ್ ಹಾಗೂ ಸಹೋದರ ದಿನಕರ್ ಜೈಲಿಗೆ ತೆರಳಿದ್ದರು. ಈ ವೇಳೆ ಮಗನ ತಬ್ಬಿ ದರ್ಶನ್ ಹಗುರಾಗಿದ್ದಾರೆ. ಇದೇ ವೇಳೆ ದರ್ಶನ್ಗೆ ಪ್ರಸಾದ ನೀಡಿದ್ದಾರೆ ವಿಜಯಲಕ್ಷ್ಮೀ. ಇತ್ತೀಚೆಗೆ ವಿಜಯಲಕ್ಷ್ಮೀ ಅವರು ಕೊಲ್ಲೂರಿನ ಮೂಕಾಂಬಿಕಾ ಸನ್ನಿಧಿಯಲ್ಲಿ ನವಚಂಡಿಕಾ ಹೋಮ ಮಾಡಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jul 30, 2024 08:13 AM