ದರ್ಶನ್ ಹುಟ್ಟುಹಬ್ಬದಂದು ಅವರಿಗೆ ದೃಷ್ಟಿ ತೆಗೆದ ಮಹಿಳೆಯರ ಮಾತು

ದರ್ಶನ್ ಹುಟ್ಟುಹಬ್ಬದಂದು ಅವರಿಗೆ ದೃಷ್ಟಿ ತೆಗೆದ ಮಹಿಳೆಯರ ಮಾತು

|

Updated on: Feb 16, 2024 | 10:31 PM

Darshan Birthday: ಕೆಲವು ಮಹಿಳಾ ಅಭಿಮಾನಿಗಳು ಒಟ್ಟಿಗೆ ಬಂದು ದರ್ಶನ್ ಅವರಿಗೆ ದೃಷ್ಟಿ ತೆಗೆದಿದ್ದು ವಿಶೇಷವಾಗಿ ಕಾಣಿಸಿತು. ದೃಷ್ಟಿ ತೆಗೆದ ಮಹಿಳೆಯರು ದರ್ಶನ್ ಬಗ್ಗೆ ಹೇಳಿದ್ದು ಹೀಗೆ...

ದರ್ಶನ್ ತೂಗುದೀಪ (Darshan Thoogudeepa) ಅವರು ಇಂದು ಅಭಿಮಾನಿಗಳೊಟ್ಟಿಗೆ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ರಾಜ್ಯದ ಮೂಲೆ-ಮೂಲೆಗಳಿಂದ ಅಭಿಮಾನಿಗಳು ಆಗಮಿಸಿ ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ದರ್ಶನ್​ರ ಮನವಿಯಂತೆ ಹಲವು ಅಭಿಮಾನಿಗಳು ದವಸ-ಧಾನ್ಯಗಳನ್ನು ತಂದು ದರ್ಶನ್​ರಿಗೆ ಅರ್ಪಿಸಿದ್ದಾರೆ. ರೈತ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮಂದಿಯೂ ಸಹ ಆಗಮಿಸಿ ದರ್ಶನ್ ಅವರಿಗೆ ಇಂದು ಶುಭ ಹಾರೈಸಿದರು. ಇದರ ನಡುವೆ ಕೆಲವು ಮಹಿಳಾ ಅಭಿಮಾನಿಗಳು ಒಟ್ಟಿಗೆ ಬಂದು ದರ್ಶನ್ ಅವರಿಗೆ ದೃಷ್ಟಿ ತೆಗೆದಿದ್ದು ವಿಶೇಷವಾಗಿ ಕಾಣಿಸಿತು. ಹಲವಾರು ಮಂದಿ ಮಹಿಳೆಯರು ಒಟ್ಟಿಗೆ ದರ್ಶನ್​ರಿಗೆ ದೃಷ್ಟಿ ತೆಗೆದರು. ಆ ಮಹಿಳೆಯರ ತಂಡ ಟಿವಿ9 ಜೊತೆ ಮಾತನಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ