ದರ್ಶನ್ ಕೈ ಹಿಡಿದು ಬಿಕ್ಕಿ ಬಿಕ್ಕಿ ಅತ್ತ ಸೌಂದರ್ಯ ಜಗದೀಶ್ ಪತ್ನಿ

|

Updated on: Apr 15, 2024 | 8:21 AM

ಸೌಂದರ್ಯ ಜಗದೀಶ್ ಅವರ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ. ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹಲವು ಸೆಲೆಬ್ರಿಟಿಗಳು ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ. ನಟ ದರ್ಶನ್​ಗೆ ಸೌಂದರ್ಯ ಜಗದೀಶ್ ಆಪ್ತರಾಗಿದ್ದರು.

ಜೆಟ್​ಲ್ಯಾಗ್ ಮಾಲೀಕ, ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ. ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹಲವು ಸೆಲೆಬ್ರಿಟಿಗಳು ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ. ನಟ ದರ್ಶನ್​ಗೆ ಸೌಂದರ್ಯ ಜಗದೀಶ್ ಆಪ್ತರಾಗಿದ್ದರು. ಅವರು ಕೂಡ ಆಗಮಿಸಿ ಅಂತಿಮ ದರ್ಶನ  ಪಡೆದಿದ್ದಾರೆ. ಈ ವೇಳೆ ದರ್ಶನ್ (Darshan) ಅವರ ಕೈ ಹಿಡಿದು ಸೌಂದರ್ಯ ಜಗದೀಶ್ ಪತ್ನಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಲವೇ ತಿಂಗಳ ಹಿಂದೆ ದರ್ಶನ್ ಮೊದಲಾದವರು ಜೆಟ್​ಲ್ಯಾಗ್​ನಲ್ಲಿ ಪಾರ್ಟಿ ಮಾಡಿದ್ದರು. ಇದರಿಂದ ಸಂಕಷ್ಟ ಎದುರಾಗಿತ್ತು. 25 ದಿನ ಜೆಟ್​ಲ್ಯಾಗ್ ಮೇಲೆ ನಿರ್ಬಂಧ ಹೇರಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ