‘ಕಾಟೇರ’ ಸಿನಿಮಾ ರಿಲೀಸ್ ಆಗಿ 100 ದಿನ; ಟಿವಿಯಲ್ಲಿ ಬರ್ತಿದೆ ದರ್ಶನ್ ಸಿನಿಮಾ

ಯುಗಾದಿ ವಾರದ ದಿನ ಬಂದಿದೆ. ಅಂದು ಎಂದಿನಂತೆ ಧಾರಾವಾಹಿಗಳು ಪ್ರಸಾರ ಕಾಣುತ್ತವೆ. ಹೀಗಾಗಿ ಎರಡು ದಿನ ಮೊದಲು ಅಂದರೆ ಭಾನುವಾರ (ಏಪ್ರಿಲ್ 7) ‘ಕಾಟೇರ’ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣಲಿದೆ.

‘ಕಾಟೇರ’ ಸಿನಿಮಾ ರಿಲೀಸ್ ಆಗಿ 100 ದಿನ; ಟಿವಿಯಲ್ಲಿ ಬರ್ತಿದೆ ದರ್ಶನ್ ಸಿನಿಮಾ
ದರ್ಶನ್
Follow us
ರಾಜೇಶ್ ದುಗ್ಗುಮನೆ
|

Updated on: Apr 06, 2024 | 3:57 PM

ದರ್ಶನ್ ನಟನೆಯ ‘ಕಾಟೇರ’ ಸಿನಿಮಾ (Katera Movie) ಡಿಸೆಂಬರ್ 29ರಂದು ಥಿಯೇಟರ್​ನಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಎನಿಸಿಕೊಂಡಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇತ್ತು. ಆ ನಿರೀಕ್ಷೆಯನ್ನು ಸಿನಿಮಾ ಹುಸಿ ಮಾಡಲೇ ಇಲ್ಲ. ‘ಕಾಟೇರ’ ಚಿತ್ರದ ಗೆಲುವನ್ನು ಫ್ಯಾನ್ಸ್ ಸಂಭ್ರಮಿಸಿದ್ದಾರೆ. ಕನ್ನಡ ಚಿತ್ರರಂಗ ಒಂದರಲ್ಲೇ ಈ ಚಿತ್ರ ಸುಮಾರು 200 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ ಅನ್ನೋದು ಹೆಮ್ಮೆಯ ವಿಚಾರ. ಈ ಸಿನಿಮಾ ರಿಲೀಸ್ ಆಗಿ ಇಂದಿಗೆ (ಏಪ್ರಿಲ್ 6) 100 ದಿನ ಆಗಿದೆ. ಈಗ ದರ್ಶನ್ ಅವರ ಈ ಸಿನಿಮಾ ಟಿವಿಯಲ್ಲಿ ಪ್ರಸಾರ ಕಾಣೋಕೆ ರೆಡಿ ಆಗಿದೆ.

ಮಂಗಳವಾರ (ಏಪ್ರಿಲ್ 9) ಯುಗಾದಿ. ಹಿಂದೂಗಳ ಪಾಲಿಗೆ ಇದು ಹೊಸ ವರ್ಷ. ಈ ಸಂದರ್ಭದಲ್ಲಿ ಕಿರುತೆರೆಯಲ್ಲಿ ಹೊಸ ಸಿನಿಮಾಗಳನ್ನು ಪ್ರಸಾರ ಮಾಡೋದು ವಾಡಿಕೆ. ಯುಗಾದಿ ವಾರದ ದಿನ ಬಂದಿದೆ. ಅಂದು ಎಂದಿನಂತೆ ಧಾರಾವಾಹಿಗಳು ಪ್ರಸಾರ ಕಾಣುತ್ತವೆ. ಹೀಗಾಗಿ ಎರಡು ದಿನ ಮೊದಲು ಅಂದರೆ ಭಾನುವಾರ (ಏಪ್ರಿಲ್ 7) ‘ಕಾಟೇರ’ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣಲಿದೆ.

View this post on Instagram

A post shared by Zee Kannada (@zeekannada)

‘2023ರ ಮೆಗಾ ಬ್ಲಾಕ್ ಬಸ್ಟರ್, ಅದ್ದೂರಿ ಡೈಲಾಗ್‌ಗಳ ಜಬರ್ದಸ್ತ್ ಪಿಚ್ಚರ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ’ ಸಿನಿಮಾ ಏಪ್ರಿಲ್ 7ರ ಸಂಜೆ 7:00ಕ್ಕೆ ನಿಮ್ಮ ಜೀ ಕನ್ನಡ ವಾಹಿನಿಯಲ್ಲಿ’ ಎಂದು ವಾಹಿನಿಯವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಇದನ್ನು ಕೇಳಿ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ.

ಇದನ್ನೂ ಓದಿ: ಇದೇನಿದು ಅಚ್ಚರಿ, ಕಿರುತೆರೆಗೆ ಕಾಲಿಟ್ಟ ‘ಕಾಟೇರ’ ನಿರ್ದೇಶಕ ತರುಣ್ ಸುಧೀರ್

‘ಕಾಟೇರ’ ಸಿನಿಮಾದಲ್ಲಿ ದರ್ಶನ್, ಆರಾಧನಾ ರಾಮ್, ಕುಮಾರ್ ಗೋವಿಂದ್, ವೈಜನಾಥ್ ಬೀರಾದಾರ್,  ಜಗಪತಿ ಬಾಬು ಮೊದಲಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ತರುಣ್ ಸುಧೀರ್ ಅವರು ನಿರ್ದೇಶನ ಮಾಡಿದ್ದಾರೆ. ರಾಕ್​ಲೈನ್ ವೆಂಕಟೇಶ್ ನಿರ್ಮಾಣದ ಈ ಸಿನಿಮಾ ಮೆಚ್ಚುಗೆ ಪಡೆದಿದೆ. ಬುಕ್ ಮೈ ಶೋನಲ್ಲಿ 60 ಸಾವಿರ ಜನ ರೇಟಿಂಗ್ ನೀಡಿದ್ದು, 9.2 ರೇಟಿಂಗ್ ಪಡೆದುಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ