ದರ್ಶನ್ ಜೈಲು ಪಾಲಾದರೂ ಮೈಸೂರು ನಂಟು ಮರೆಯದ ವಿಜಯಲಕ್ಷ್ಮೀ
ನಟ ದರ್ಶನ್ ಅವರು ಜೈಲು ಸೇರಿದ್ದಾರೆ. ಹೀಗಿರುವಾಗಲೇ ಅವರ ಪತ್ನಿ ವಿಜಯಲಕ್ಷ್ಮೀ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ವಿಜಯಲಕ್ಷ್ಮೀ ಅವರು ಈಗ ಮೈಸೂರ ದಸರಾ ಆನೆಯ ಮಾವುತರಿಗೆ ಕುಕ್ಕರ್ ನೀಡಿದ್ದಾರೆ ಅನ್ನೋದು ವಿಶೇಷ. ಆ ಬಗ್ಗೆ ಇಲ್ಲಿದೆ ವಿವರ .
ನಟ ದರ್ಶನ್ (Darshan) ಅವರಿಗೆ ಪ್ರಾಣಿಗಳ ಮೇಲೆ ಅಪಾರ ಪ್ರೀತಿ. ನಟಿ ವಿಜಯಲಕ್ಷ್ಮೀ ಕೂಡ ಇದೇ ಮನಸ್ಥಿತಿ ಹೊಂದಿದ್ದಾರೆ. ದರ್ಶನ್ ಹೆಚ್ಚಿನ ಸಮಯ ಮೈಸೂರಿನಲ್ಲಿ ಕಳೆಯುತ್ತಿದ್ದರು. ಅವರು ಈಗ ಜೈಲು ಸೇರಿದ್ದಾರೆ. ಆದರೂ, ವಿಜಯಲಕ್ಷ್ಮೀ ಮೈಸೂರಿನ ನಂಟು ಕಳೆದುಕೊಂಡಿಲ್ಲ. ಈಗ ಅವರು ದಸರಾ ಆನೆ ಮಾವುತರ ಕುಟುಂಬಕ್ಕೆ ಕುಕ್ಕರ್ ನೀಡಿದ್ದಾರೆ. ಜೊತೆಗೆ ಊಟ ಕೂಡ ಹಾಕಿಸಿದ್ದಾರೆ. ವಿಜಯಲಕ್ಷ್ಮಿ ಸಮಾಜಮುಖಿ ಕೆಲಸದಲ್ಲಿ ಧನ್ವೀರ್ ಕೂಡ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Aug 30, 2025 10:34 AM
