ವ್ಯಾಪಾರಿ ಬಳಿ ಚಿನ್ನ ದರೋಡೆ: ಓರ್ವ PSI ಸೇವೆಯಿಂದ ವಜಾ, ಮತ್ತೋರ್ವ ಇನ್ಸ್ಪೆಕ್ಟರ್ ಅಮಾನತು
ಚಿನ್ನದ (Gold) ವ್ಯಾಪಾರಿ ವಿಶ್ವನಾಥ್ ಬಳಿ ದರೋಡೆ ಮಾಡಿದ್ದ ಇಬ್ಬರು ಪಿಎಸ್‍ಐ ಸೇರಿ ನಾಲ್ವರನ್ನು ಈಗಾಗಲೇ ದಾವಣಗೆರೆಯ (Davanagere) ಕೆಟಿಜೆ ನಗರ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಓರ್ವ ಪಿಎಸ್ ಐ ನನ್ನು ಸೇವೆಯಿಂದ ವಜಾ ಮಾಡಿದ್ದು, ಮತ್ತೋರ್ವರನ್ನು ಇನ್ನೊಬ್ಬ ಸೇವೆಯಿಂದ ಅಮಾನತ್ತು ಮಾಡಿ ಪೂರ್ವ ವಲಯ ಐಜಿಪಿ ಡಾ. ಬಿ.ಆರ್.ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ. A1ಆರೋಪಿ ಪಿಎಸ್ಐ ಹಾವೇರಿಯ ಹಂಸಭಾವಿ ಪೊಲೀಸ್ ಠಾಣೆಯ ಪ್ರೋಬೇಷನರಿ ಪಿಎಸ್ ಐ ಮಾಳಪ್ಪ ಯಲ್ಲಪ್ಪ ಚಿಪ್ಪಲಕಟ್ಟಿ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ. ಇನ್ನು ಶಿವಮೊಗ್ಗದ ಸಾಗರ ಟೌನ್ ಪೊಲೀಸ್ ಠಾಣೆಗೆ ಅದೇಶದಲ್ಲಿದ್ದ ಪಿಎಸ್ಐ ಪ್ರವೀಣ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ.
ದಾವಣಗೆರೆ, (ನವೆಂಬರ್ 27): ಚಿನ್ನದ (Gold) ವ್ಯಾಪಾರಿ ವಿಶ್ವನಾಥ್ ಬಳಿ ದರೋಡೆ ಮಾಡಿದ್ದ ಇಬ್ಬರು ಪಿಎಸ್‍ಐ ಸೇರಿ ನಾಲ್ವರನ್ನು ಈಗಾಗಲೇ ದಾವಣಗೆರೆಯ (Davanagere) ಕೆಟಿಜೆ ನಗರ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಓರ್ವ ಪಿಎಸ್ ಐ ನನ್ನು ಸೇವೆಯಿಂದ ವಜಾ ಮಾಡಿದ್ದು, ಮತ್ತೋರ್ವರನ್ನು ಇನ್ನೊಬ್ಬ ಸೇವೆಯಿಂದ ಅಮಾನತ್ತು ಮಾಡಿ ಪೂರ್ವ ವಲಯ ಐಜಿಪಿ ಡಾ. ಬಿ.ಆರ್.ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ. A1ಆರೋಪಿ ಪಿಎಸ್ಐ ಹಾವೇರಿಯ ಹಂಸಭಾವಿ ಪೊಲೀಸ್ ಠಾಣೆಯ ಪ್ರೋಬೇಷನರಿ ಪಿಎಸ್ ಐ ಮಾಳಪ್ಪ ಯಲ್ಲಪ್ಪ ಚಿಪ್ಪಲಕಟ್ಟಿ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ. ಇನ್ನು ಶಿವಮೊಗ್ಗದ ಸಾಗರ ಟೌನ್ ಪೊಲೀಸ್ ಠಾಣೆಗೆ ಅದೇಶದಲ್ಲಿದ್ದ ಪಿಎಸ್ಐ ಪ್ರವೀಣ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ.
ನಾವು ಐಜಿ ಸ್ಕ್ವಾಡ್ ಎಂದು ನಕಲಿ ಗನ್ ಐಡಿ ಕಾರ್ಡ್ ತೋರಿಸಿ ಚಿನ್ನದ ವ್ಯಾಪಾರಿ ವಿಶ್ವನಾಥ್ ನನ್ನು ಹೆದರಿಸಿದ ಬಂಗಾರವನ್ನು ದರೋಡೆ ಮಾಡಿದ್ದರು. ಈ ಘಟನೆ ನವೆಂಬರ್ 24ರಂದು ದಾವಣಗೆರೆಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿತ್ತು. ಇದೀಗ ಕಳ್ಳ ಪೊಲೀಸರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗಿದೆ.
