ಹೆಬ್ಬಾಳು ಟೋಲ್ ಗೇಟ್ ಬಳಿ ಕಾನ್​ಸ್ಟೇಬಲ್ ಸಾವು; ಕೆಮೆರಾ ಇರಲಿಲ್ಲ ಎಂದಿದ್ದಕ್ಕೆ ಕಿಡಿಕಾರಿದ ದಾವಣಗೆರೆ ಎಸ್​​ಪಿ

ಅರುಣ್​ ಕುಮಾರ್​ ಬೆಳ್ಳಿ

Updated on: May 15, 2025 | 3:24 PM

ಇಂಥ ಪ್ರಕರಣಗಳು ನಡೆದಾಗ ಸೋಶಿಯಲ್ ಮೀಡಿಯಗಳಲ್ಲಿ ಪೋಸ್ಟ್ ಹಾಕುವವರ ಮೇಲೆ ಉಮಾ ಪ್ರಶಾಂತ ಕಿಡಿಕಾರಿದರು. ಅಸಲಿಗೆ ಏನು ನಡೆದಿದೆ ಅನ್ನೋದನ್ನು ಅರ್ಥಮಾಡಿಕೊಳ್ಳದೆ ಎಲ್ಲೋ ಕೂತು ಏನೇನೋ ಕಾಮೆಂಟ್ ಮಾಡೋದು ಬಹಳ ಸುಲಭ, ಅಂಥವರ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಸಿಬ್ಬಂದಿಗೆ ಹೇಳಿದ್ದೇನೆ, ತಮ್ಮ ಸಿಬ್ಬಂದಿಯಿಂದ ತಪ್ಪೇನಾದರೂ ಜರುಗಿದ್ದರೆ ದೂರು ಸ್ವೀಕರಿಸಲು ಸಿದ್ದರಿದ್ದೇವೆ ಎಂದು ಉಮಾ ಪ್ರಶಾಂತ್ ಹೇಳಿದರು

ದಾವಣಗೆರೆ, ಮೇ 15: ದಾವಣಗೆರೆಯ ಹೆಬ್ಬಾಳು ಟೋಲ್ ಗೇಟ್ (Hebbalu toll gate) ಬಳಿ ಎರಡು ದಿನಗಳ ಹಿಂದೆ ಕ್ಯಾಂಟರ್ ಹರಿದು ಪೊಲೀಸ್ ಕಾನ್​​ಸ್ಟೇಬಲ್ ರಾಮಪ್ಪ ಪೂಜಾರ್ ಸಾವಿಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ವಿವರಣೆ ನೀಡಿದರು. ಕ್ಯಾಂಟರ್ ಚಾಲಕ ವಾಹನವನ್ನು ಎಡಕ್ಕೆ ತೆಗೆದುಕೊಳ್ಳುವ ಬದಲು ಬಲಭಾಗಕ್ಕೆ ಬಂದಿದ್ದರಿಂದ ಪಿಸಿಯ ಮೇಲೆ ಅದು ಹರಿದು ಸಾವು ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು. ಟೋಲ್ ಗೇಟ್​ ಬಳಿ ಸಿಸಿಟಿವಿ ಇರಲಿಲ್ಲ ಅಂತ ಹೇಳಿದ್ದನ್ನು ಖಡಾಖಂಡಿತವಾಗಿ ಅಲ್ಲಗಳೆದ ಅವರು ಲೇನ್ ಡಿಸಿಪ್ಲಿನ್ ಪ್ರಾಜೆಕ್ಟ್ 2022 ರಿಂದ ಕಾರ್ಯ ನಿರ್ವಹಿಸುತ್ತಿದೆ ಮತ್ತು ಯೋಜನೆ ಅಡಿ 12 ಕೆಮೆರಾಗಳನ್ನು ಅಳವಡಿಸಲಾಗಿದೆ, ಲೇನ್ ಉಲ್ಲಂಘನೆಯಂಥ ಪ್ರಕರಣ ನಡೆದರೆ ಪಿಡಿಎಂಎಸ್ ಡಿವೈಸ್​ಗಳಲ್ಲಿ ಅದು ಸೆರೆಯಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ:   ದಾವಣಗೆರೆ: ಗ್ಯಾಂಗ್ ರೇಪ್ ಆಗಿದೆ ಅಂತ ಸುಳ್ಳು ಸುದ್ದಿ ಹಬ್ಬಿಸಿದ್ದ ವಿದ್ಯಾರ್ಥಿನಿಗೆ ಎಸ್​ಪಿ ಎಚ್ಚರಿಕೆ  

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.