ಬೇರೊಬ್ಬನ ಜೊತೆ ಅನೈತಿಕ ಸಂಬಂಧ; ಪತ್ನಿಯನ್ನು ಕೋರ್ಟ್‌ನಲ್ಲೇ ಚುಚ್ಚಿಕೊಂದ ಪತಿರಾಯ

Updated on: Sep 24, 2025 | 11:27 AM

ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೋರ್ಟ್‌ ಆವರಣದಲ್ಲಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿದಂತಹ ಘಟನೆ ದಾವಣಗೆರೆಯಲ್ಲಿ ನಡೆದಿದೆ. ‌ಹೆಂಡ್ತಿಗೆ ಪರಪುರುಷನೊಂದಿಗೆ ಅನೈತಿಕ ಸಂಬಂಧವಿತ್ತು ಎಂಬ ವಿಚಾರ ಗೊತ್ತಾದ ಬಳಿಕ ಗಂಡ ಹೆಂಡ್ತಿ ನಡುವೆ ಜಗಳ ಏರ್ಪಟ್ಟಿದೆ. ಈ ಗಲಾಟೆ ಕೋರ್ಟ್‌ ಮೆಟ್ಟಿಲೇರಿದ್ದು, ವಿಚಾರಣೆಗಾಗಿ ಕೋರ್ಟ್‌ಗೆ ಬಂದ ಹೆಂಡ್ತಿ ಮುಸ್ಕಾನ್‌ನನ್ನು ಗಂಡ ಖಲೀಮ್‌ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ.

ದಾವಣಗೆರೆ, ಸೆಪ್ಟೆಂಬರ್‌ 24: ಅನೈತಿಕ ಸಂಬಂಧದ (Extra Marital Affairs) ಕಾರಣ ನಡೆಯುವಂತಹ ಕೊಲೆ, ಕೌಟುಂಬಿಕ ಕಲಹಗಳ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತವೆ. ದಾವಣಗೆರೆಯಲ್ಲೊಂದು ಅಂತಹದ್ದೇ ಆಘಾತಕಾರಿ ಘಟನೆ ನಡೆದಿದ್ದು, ಕೋರ್ಟ್‌ಗೆ ವಿಚಾರಣೆಗಾಗಿ ಬಂದಿದ್ದ ಹೆಂಡ್ತಿಯನ್ನು ಗಂಡ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಮನೆಯಲ್ಲಿ ಸಿಸಿ ಟಿವಿ ಅಳವಡಿಸಿದ ಕಾರಣ ಹೆಂಡ್ತಿ ಮುಸ್ಕಾನ್‌ಳ ಅನೈತಿಕ ಸಂಬಂಧದ ಗುಟ್ಟು ಗಂಡ ಖಲೀಮ್‌ನ ಮುಂದೆ ಬಟಾಬಯಲಾಗಿದ್ದು, ಇವರ ಈ ಕೌಟುಂಬಿಕ ಜಗಳ ಕೋರ್ಟ್‌ ಮೆಟ್ಟಿಲೇರಿತ್ತು. ಇದೇ ವಿಚಾರಣೆಗಾಗಿ ಕೋರ್ಟ್‌ಗೆ ಬಂದಂತಹ ಮುಸ್ಕಾನ್‌ನನ್ನು ಖಲೀಮ್‌ ಕೋರ್ಟ್‌ ಆವರಣದಲ್ಲಿಯೇ ಚುಚ್ಚಿ ಕೊಲೆ ಮಾಡಿದ್ದಾನೆ. ಈ ಆಘಾತಕಾರಿ ಘಟನೆಯ ಬಗ್ಗೆ ಖಲೀಮ್‌ ಸಂಬಂಧಿಯೊಬ್ಬರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ