ದಾವಣಗೆರೆ: 20 ಲಕ್ಷ ಮೌಲ್ಯದ ಚಿನ್ನ ಹಿಂದಿರುಗಿಸಿದ ಅಂಗಡಿ ಮಾಲೀಕ; ರುದ್ರೇಶ್ ಪ್ರಾಮಾಣಿಕತೆಗೆ ಪೊಲೀಸರ ಮೆಚ್ಚುಗೆ

Edited By:

Updated on: May 02, 2026 | 10:29 PM

ದಾವಣಗೆರೆಯಲ್ಲಿ ನಡೆದ ಪ್ರಾಮಾಣಿಕ ಘಟನೆಯೊಂದರಲ್ಲಿ, ಅಂಗಡಿ ಮಾಲೀಕ ರುದೇಶ್ ನಾಯ್ಕ್ ಅವರು ಗ್ರಾಹಕರು ಮರೆತುಹೋಗಿದ್ದ 20 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು ಹಿಂದಿರುಗಿಸಿದ್ದಾರೆ. ತಮ್ಮ ಅಂಗಡಿಯಲ್ಲಿ ಬಿಟ್ಟುಹೋಗಿದ್ದ ಚಿನ್ನದ ಬ್ಯಾಗ್ ಅನ್ನು ಅವರು ತಕ್ಷಣವೇ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಅವರ ಈ ಪ್ರಾಮಾಣಿಕತೆಗೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ, ಮೇ 02: ಗ್ರಾಹಕರೊಬ್ಬರು ಅಂಗಡಿಯಲ್ಲಿ ಬಿಟ್ಟುಹೋಗಿದ್ದ 20 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು ಮಾಲೀಕ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿರುವಂತಹ ಘಟನೆ ದಾವಣಗೆರೆ ನಗರ ಗಡಿಯಾರ ಕಂಬದ ವಿಜಯಲಕ್ಷ್ಮಿ ರಸ್ತೆಯಲ್ಲಿರುವ ಎ ಟು ಝಡ್ ಡ್ರೈ ಫುಡ್ಸ್ ಅಂಗಡಿಯಲ್ಲಿ ನಿನ್ನೆ ನಡೆದಿದೆ. ರುದೇಶ್​ ನಾಯ್ಕ್ ಅವರ ಅಂಗಡಿಗೆ ಬಂದಿದ್ದ ಮಹಿಳಾ ಗ್ರಾಹಕಿಯೊಬ್ಬರು ಚಿನ್ನಾಭರಣದ ಬ್ಯಾಗ್ ಮರೆತು ಹೋಗಿದ್ದರು. ಇಂದು ಬಂದು ತೆಗೆದುಕೊಂಡು ಹೋಗಬಹುದು ಎಂದು ಬ್ಯಾಗ್ ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಆದರೆ ಯಾರು ಬಾರದ ಹಿನ್ನಲೆ ಬಸವನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಇಷ್ಟರಲ್ಲಿ ಚಿನ್ನಾಭರಣ ಬಿಟ್ಟುಹೋಗಿದ್ದ ಮಾಲೀಕರು ಸಹ ಪತ್ತೆ ಆಗಿದ್ದು, ಪೊಲೀಸರ ಸಮ್ಮುಖದಲ್ಲೇ ಚಿನ್ನಾಭರಣ ಹಿಂದಿರುಗಿಸಲಾಗಿದೆ. ಸದ್ಯ ರುದ್ರೇಶ್ ನಾಯ್ಕ್ ಪ್ರಾಮಾಣಿಕತೆ ಬಗ್ಗೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us
ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More