Loading video

Bengaluru: ಶೋಭಾ ಕರಂದ್ಲಾಜೆಯ ಮೆದುಳಿರಲಿಲ್ವಾ ಕಾಮೆಂಟ್ ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್

|

Updated on: Jun 22, 2023 | 4:50 PM

ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಬೇಕೆಂಬ ಕಾಳಜಿಯಾದರೂ ನಮಗಿದೆ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಇರುವ ವ್ಯತ್ಯಾಸವೇ ಅದು ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರು: ಅನ್ನಭಾಗ್ಯ ಯೋಜನೆಗೆ ಅಕ್ಕಿ ಹೊಂದಿಸಲು ಕಷ್ಟವಾಗುತ್ತಿದೆಯಾದರೂ ಯೋಜನೆಯನ್ನು ಖಂಡಿತವಾಗಿ ಜಾರಿ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಿವಕುಮಾರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ‘ಕಾಂಗ್ರೆಸ್ ನಾಯಕರಿಗೆ ಮೆದುಳಿರಲಿಲ್ವಾ’ ಅಂತ ಮಾಡಿದ ಕಾಮೆಂಟ್ ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮೊದಲು ಬಿಜೆಪಿ ನಾಯಕರು ವಿದೇಶಗಳಿಂದ ಕಪ್ಪು ಹಣ (black money) ತರ್ತೀವಿ, ಎಲ್ಲರ ಖಾತೆಗಳಿಗೆ ತಲಾ ರೂ. 15 ಹಾಕ್ತೀವಿ, ರೈತರ ಆದಾಯ ದುಪ್ಟಟ್ಟು ಮಾಡ್ತೀವಿ ಅಂತೆಲ್ಲ ಹೇಳಿದ್ದರು, ಅವೆಲ್ಲ ಕೇವಲ ನುಡಿಮುತ್ತುಗಳಾ? ಅಂತ ಶಿವಕುಮಾರ್ ಪ್ರಶ್ನಿಸಿದರು. ನಮ್ಮ ಸರ್ಕಾರಕ್ಕೆ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಬೇಕೆಂಬ ಕಾಳಜಿಯಾದರೂ ಇದೆ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಇರುವ ವ್ಯತ್ಯಾಸವೇ ಅದು ಎಂದು ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ