ಕಸ ವಿಲೇವಾರಿ ಮರು ಟೆಂಡರ್ಗೆ ಹೈಕೋರ್ಟ್ ತಡೆಯಾಜ್ಞೆ, ಪ್ರತಿಕ್ರಿಯೆ ನೀಡಿದ ಡಿಸಿಎಂ ಶಿವಕುಮಾರ್
ಡಿಸಿಎಂ ಡಿಕೆ ಶಿವಕುಮಾರ್ ಮಾಧ್ಯಮಗಳ ಜೊತೆ ಮಾತಾಡುವ ಮೊದಲು ವಿಧಾನಸೌಧದ ಅವರಣದಲ್ಲಿ ಸೈಕ್ಲಿಂಗ್ ಮಾಡಿದರು. ಅವರೊಂದಿಗೆ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಕೂಡ ಇದ್ದರು. ಆದರೆ ಅರಣ್ಯ ಖಾತೆ ಸಚಿವ ಈಶ್ವರ್ ಖಂಡ್ರೆ ಅವರು ಶಿವಕುಮಾರ್ ಸೈಕ್ಲಿಂಗ್ ಮಾಡುವಾಗ ಕಾಣಿಸದಿದ್ದರೂ ಮಾಧ್ಯಮಗಳೊಂದಿಗೆ ಮಾತಾಡುವಾಗ ಅವರ ಎಡಭಾಗದಲ್ಲಿ ನಿಂತಿದ್ದರು.
ಬೆಂಗಳೂರು, ಜೂನ್ 17: ವಿಧಾನ ಸೌಧ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕಸ ವಿಲೇವಾರಿಗೆ ಮರು ಟೆಂಡರ್ ಆಹ್ವಾನಿಸಿರುವುದರ ವಿರುದ್ಧ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ (interim stay order) ನೀಡಿರುವುದಕ್ಕೆ ಪ್ರತಿಕ್ರಿಯಿಸುತ್ತಾ, ನಗರದಲ್ಲಿ ಕಸದ ವಿಲೇವಾರಿ ಆಗದಿದ್ದರೆ ಬಹಳ ಕಷ್ಟವಾಗುತ್ತದೆ, ಉಚ್ಚ ನ್ಯಾಯಾಲಯದ ಆದೇಶದ ಬಗ್ಗೆ ಕಾಮೆಂಟ್ ಮಾಡಲ್ಲ, ಆದರೆ ಕಸ ವಿಲೇವಾರಿ ಮಾಡುವ ಒಂದು ಗುಂಪು ಕಾರ್ಟೆಲ್ ಮಾಡಿಕೊಂಡು ಬಿಬಿಎಂಪಿಯನ್ನು ಓವರ್ ಮಾಡಬಹುದು ಅಂದುಕೊಂಡಿದೆ, ವಸ್ತುಸ್ಥಿತಿಯನ್ನು ಕೋರ್ಟ್ಗೆ ಅರ್ಥ ಮಾಡಿಸುತ್ತೇವೆ ಎಂದರು.
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Published on: Jun 17, 2025 11:31 AM
Follow Us