Bengaluru News: ತನ್ನ ಹಿಂದೆ ಬರದಿರುವಂತೆ ಕಾರ್ಯಕರ್ತರನ್ನು ಕೈಮುಗಿದು ವಿನಂತಿಸಿಕೊಂಡ ಡಿಸಿಎಂ ಡಿಕೆ ಶಿವಕುಮಾರ್
ಜಲಮಂಡಳಿಯ ಕಾಮಗಾರಿಗಳನ್ನು ವೀಕ್ಷಿಸುವಾಗ ಇಂಧನ ಸಚಿವ ಕೆಜೆ ಜಾರ್ಜ್ ಉಪ ಮುಖ್ಯಮಂತ್ರಿಯೊಂದಿಗಿದ್ದರು.
ಬೆಂಗಳೂರು: ಕಾರ್ಯಕರ್ತರು ಯಾವ ಪಕ್ಷದವರೇ ಆಗಿರಲಿ, ತಮ್ಮ ನಾಯಕರೊಂದಿಗೆ ಸುತ್ತುವುದು, ಅವರು ಕಂಡೊಡನೆ ಬಳಿಗೋಡುವುದು ಅಂದರೆ ಬಹಳ ಇಷ್ಟ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಇಂದು ಮತ್ತೊಮ್ಮೆ ಬೆಂಗಳೂರು ನಗರ ಪ್ರದಕ್ಷಿಣೆ (Bengaluru Rounds) ಹಾಕಿ ಜಾರಿಯಲ್ಲಿರುವ ಕಾಮಗಾರಿಗಳನ್ನು ವೀಕ್ಷಿಸಿದರು. ಆದರೆ, ಅಗಲೇ ಹೇಳಿದಂತೆ ಅವರ ಸುತ್ತಮುತ್ತ ಕಾರ್ಯಕರ್ತರು! ಅಧಿಕಾರಿಗಳೊಂದಿಗೆ ವಿಷಯಗಳನ್ನು ಚರ್ಚಿಸಲು ಬಿಡದ ಹಾಗೆ ಜನ ಉಪ ಮುಖ್ಯಮಂತ್ರಿಯ ದುಂಬಾಲು ಬಿದ್ದಿದ್ದ್ದರು. ಆದರೆ, ಗಮನಿಸಬೇಕಾದ ಸಂಗತಿಯೆಂದರೆ ಶಿವಕುಮಾರ್ ಮೊದಲಿನ ಹಾಗೆ ಈಗ ರೇಗಾಡುತ್ತಿಲ್ಲ. ವಿರೋಧ ಪಕ್ಷದ ನಾಯಕರನ್ನು ಟೀಕಿಸುವಾಗಲೂ ಸೌಮ್ಯವಾಗಿ, ಕಠೋರ ಪದಗಳನ್ನು ಬಳಸದೆ, ರೇಗದೆ ಮಾತಾಡುತ್ತಾರೆ. ಇಲ್ಲೂ ಅವರು ತಮ್ಮ ಹಿಂದೆಯೇ ಬರುತ್ತಿದ್ದ ಕಾರ್ಯಕರ್ತರಿಗೆ ಕೈಮುಗಿದುಮ ದಯವಿಟ್ಟು ಯಾರೂ ನನ್ನ ಹಿಂದೆ ಬರಬೇಡಿ ಅಂತ ಹೇಳುತ್ತಾರೆ. ಅವರ ಸೌಜನ್ಯಪೂರ್ವಕ ಮತು ಕೇಳಿದ ಬಳಿಕ ಅಭಿಮಾನಿಗಳು, ಕಾರ್ಯಕರ್ತರು ಹಿಂದೆ ಸರಿಯುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ