ಹದಿನಾರರ ಪೋರ ಚಿರಂತ್ ಹೊನ್ನಾವರ ಸಾಧನೆಗೆ ಮೂಳೆ ಕ್ಯಾನ್ಸರ್ ಅಡ್ಡಿಯಾಗಲಿಲ್ಲ, ಹತ್ತನೇ ತರಗತಿಯಲ್ಲಿ 92% ಮಾರ್ಕ್ಸ್!

ಅರುಣ್​ ಕುಮಾರ್​ ಬೆಳ್ಳಿ

Updated on: May 02, 2025 | 10:08 PM

ಐಸಿಎಸ್​ಸಿ ಮತ್ತು ಸಿಬಿಎಸ್​ಸಿ ಸಿಲಬಸ್ ರಾಜ್ಯದ ಪಠ್ಯಕ್ರಮಕ್ಕಿಂತ ಕಠಿಣವಾಗಿರುತ್ತದೆ ಅನ್ನೋದು ನಿರ್ವಿವಾದಿತ. ಬಲಗೈ ಅಂದರೆ ತನ್ನ ಸ್ವಾಭಾವಿಕ ಕೈಯ ಮೊಣಕೈ ಭಾಗದಿಂದ ಹೆಚ್ಚುಕಡಿಮೆ ಮುಂಗೈವರೆಗಿನ ಮೂಳೆಯನ್ನು ಕಳೆದುಕೊಂಡಿರುವ ಚಿರಂತ್, ಐಸಿಎಸ್​ಸಿ ಸಿಲಬಸ್​ನೊಂದಿಗೆ ಹತ್ತನೇ ತರಗತಿಯಲ್ಲಿ ಶೇಕಡ 92ರಷ್ಟು ಅಂಕ ತೆಗೆದಿದ್ದಾನೆ. ಅವನನ್ನು ಹೆತ್ತ ಗುರುಪ್ರಸಾದ್ ಮತ್ತು ಪಲ್ಲವಿ ಸಂತೋಷದ ಅಲೆಯಲ್ಲಿ ತೇಲುತ್ತಿದ್ದಾರೆ!

ಬೆಂಗಳೂರು, ಮೇ 2: ಚಿರಂತ್ ಹೊನ್ನಾವರಗೆ ಈಗಷ್ಟೇ 16 ರ ಪ್ರಾಯ, ಅದರೆ ಅವನಲ್ಲಿರುವ ಛಲ, ಪ್ರಯತ್ನಶೀಲತೆ ಮತ್ತು ಗುರಿ ಸಾಧಿಸುವೆಡೆ ಇರುವ ಬದ್ಧತೆ ಎಂಥವರನ್ನೂ ದಂಗಾಗಿಸುತ್ತದೆ. ಚಿರಂತ್​​ಗೆ 14ನೇ ವಯಸ್ಸಿನಿಂದಲೇ ಮಾರಕ ಕ್ಯಾನ್ಸರ್ ರೋಗ ಬಾಧಿಸಲಾರಂಭಿಸಿದೆ. ಅದು ಮೂಳೆ ಕ್ಯಾನ್ಸರ್. ಅದರೆ ಹುಡುಗ ಹೆದರಲಿಲ್ಲ, ಅತಂಕಕ್ಕೊಳಗಾಗಲಿಲ್ಲ. ಅದು ಕೆಲ ದಿನಗಳ ಮಟ್ಟಿಗೆ ತನ್ನನ್ನು ಕಾಡಬಹುದು, ಅದರೆ ತನ್ನ ವಿದ್ಯಾರ್ಥಿ ಬದುಕಿನ ಓಟವನ್ನು ತಡೆಯಲಾರದು ಅಂತ ಮನಸ್ಸನ್ನು ಗಟ್ಟಿ ಮಾಡಿಕೊಂಡು ಓದಿನೆಡೆ ಗಮನವಹಿಸಿದ. ಅವನ ಛಲ ಕಂಡು ಮಹಾಮಾರಿಯೂ ದಿಗಿಲುಗೊಂಡಿರಬಹುದು. ಚಿರಂತ್​ನ ಬಲಗೈ ಮೂಳೆಯನ್ನು ತೆಗೆಯಬೇಕಾದ ಅನಿವಾರ್ಯತೆ ಎದುರಾದರೂ ಎಂಟೆದೆಯ ಹುಡುಗ ಧೃತಿಗೆಡಲಿಲ್ಲ. ತನ್ನ ಸಾಧನೆಯ ಹಾದಿಯನ್ನು ಕನ್ನಡಿಗರಿಗೆ ಹೇಳಲು ನಮ್ಮ ಕಚೇರಿಗೆ ಬಂದಿದ್ದಾನೆ, ಅವನ ಬಾಯಿಂದಲೇ ಕೇಳಿ ಹೋರಾಟದ ಕಥೆಯನ್ನು.

ಇದನ್ನೂ ಓದಿ:   Karnataka SSLC Results 2025 Toppers: ಎಸ್​ಎಸ್​ಎಲ್​ಸಿ ಫಲಿತಾಂಶ: ಶಿವಮೊಗ್ಗದ ನಮನ ಸೇರಿ 22 ವಿದ್ಯಾರ್ಥಿಗಳಿಗೆ ಔಟ್​ ಆಫ್​ ಔಟ್

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.