ಜಾತಿ ಸಮೀಕ್ಷೆಯ ಚರ್ಚೆ ಮತ್ತು ಅನುಷ್ಠಾನ ಯಾವಾಗ ಅಂತ ಸರ್ಕಾರವನ್ನೇ ಕೇಳಬೇಕು: ಬಿಕೆ ಹರಿಪ್ರಸಾದ್

|

Updated on: Oct 03, 2023 | 1:17 PM

ಕರ್ನಾಟಕದಲ್ಲೂ ಜಾತಿಗಣನೆ ಆಗಿದೆ, ಅದನ್ನು ನಡೆಸಿದ ಕಾಂತರಾಜ್ ಆಯೋಗವು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ ಎಂದು ಹರಿಪ್ರಸಾದ್ ಹೇಳಿದರು. ಕರ್ನಾಟಕ ಸರ್ಕಾರ ಕಾಂತರಾಜ್ ವರದಿಯನ್ನು ವಿಧಾನ ಸಭೆಯ ಎರಡೂ ಮನೆಗಳಲ್ಲಿ ಚರ್ಚೆಗೆ ತರಬೇಕಿದೆ, ಅದರಲ್ಲಿರುವ ತಪ್ಪು ಒಪ್ಪುಗಳನ್ನು ಸರಿಪಡಿಸಬೇಕಿದೆ ಮತ್ತು ವಿಧಾನ ಸಭೆ ಮತ್ತು ಪರಿಷತ್ ಅದನ್ನು ಪಾಸು ಮಾಡಿಸಿ ಅನುಷ್ಠಾನಕ್ಕೆ ತರಬೇಕಿದೆ ಎಂದು ಹೇಳಿದರು.

ದೆಹಲಿ: ಜಾತಿ ಆಧಾರಿತ ಜನಗಣನೆ (Caste Census Population) ಅಥವಾ ಜಾತಿ ಸಮೀಕ್ಷೆಯನ್ನು ಬಹಿರಂಗಗೊಳಿಸಿದ ರಾಷ್ಟ್ರದ ಮೊದಲ ರಾಜ್ಯ ಬಿಹಾರದ ಮುಖ್ಯಮಂತ್ರಿ ನೀತಿಷ್ ಕುಮಾರ್ (Nitish Kumar) ಹಾಗೂ ರಾಜ್ಯದ ಹಿರಿಯ ನಾಯಕನಾಗಿರುವ ಲಾಲೂ ಪ್ರಸಾದ್ ಯಾದವ್ (Lalu Prasad Yadav) ಅವರನ್ನು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ (BK Hariprasad) ಸದಸ್ಯ ಅಭಿನಂದಿಸಿದರು. ದೆಹಲಿಯಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಹರಿಪ್ರಸಾದ್, ಜಾತಿ ಆಧಾರಿತ ಜನಗಣನೆಯಾಗಬೇಕು, ಹಾಗಾದಲ್ಲಿ ಮಾತ್ರ ಯಾವ್ಯಾವ ಸಮುದಾಯಗಳಿಗೆ ಅರ್ಹ ಸವಲತ್ತುಗಳು ಸಿಕ್ಕಿಲ್ಲ ಅನ್ನೋದು ಗೊತ್ತಾಗುತ್ತದೆ ಅಂತ ರಾಹುಲ್ ಗಾಂಧಿಯವರು ಹೇಳುತ್ತಾರೆ. ಅವರ ಆಶಯದ ಮೇರೆಗೆ ಕರ್ನಾಟಕದಲ್ಲೂ ಜಾತಿಗಣನೆ ಆಗಿದೆ, ಅದನ್ನು ನಡೆಸಿದ ಕಾಂತರಾಜ್ ಆಯೋಗವು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ ಎಂದು ಹರಿಪ್ರಸಾದ್ ಹೇಳಿದರು.

ಮುಂದುವರಿದ ಮಾತಾಡಿದ ಅವರು, ಕರ್ನಾಟಕ ಸರ್ಕಾರ ಕಾಂತರಾಜ್ ವರದಿಯನ್ನು ವಿಧಾನ ಸಭೆಯ ಎರಡೂ ಮನೆಗಳಲ್ಲಿ ಚರ್ಚೆಗೆ ತರಬೇಕಿದೆ, ಅದರಲ್ಲಿರುವ ತಪ್ಪು ಒಪ್ಪುಗಳನ್ನು ಸರಿಪಡಿಸಬೇಕಿದೆ ಮತ್ತು ವಿಧಾನ ಸಭೆ ಮತ್ತು ಪರಿಷತ್ ಅದನ್ನು ಪಾಸು ಮಾಡಿಸಿ ಅನುಷ್ಠಾನಕ್ಕೆ ತರಬೇಕಿದೆ ಎಂದು ಹೇಳಿದರು. ತಾನು ಪಕ್ಷದ ಸದಸ್ಯನಾಗಿರುವುದರಿಂದ ಇದರ ಬಗ್ಗೆ ಮಾತಾಡುವ ಹಕ್ಕಿದೆ, ಆದರೆ ಅದರ ಚರ್ಚೆ ಮತ್ತು ಅನುಷ್ಠಾನ ನಡೆಯೋದು ಯಾವಾಗ ಅಂತ ಸರ್ಕಾರವನ್ನೇ ಕೇಳಬೇಕು ಎಂದು ಹರಿಪ್ರಸಾದ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ