ಬಂಡೆಮಠ ಬಸವಲಿಂಗ ಸ್ವಾಮಿ ಡೆತ್ ನೋಟ್ ನಲ್ಲಿ ಅನಾಮಧೇಯ ವ್ಯಕ್ತಿಯನ್ನು ಉಲ್ಲೇಖಿಸಿದ್ದಾರೆ: ರಾಮನಗರ ಎಸ್ ಪಿ
ಮತ್ತೊಬ್ಬ ಅನಾಮಧೇಯ ವ್ಯಕ್ತಿಯ ಬಗ್ಗೆ ಅವರು ಉಲ್ಲೇಖಿಸಿ ಅವನಾಡಿರುವ ಮಾತುಗಳಿಂದ ಬೇಜಾರಾಗಿದೆ ಅಂತ ಸ್ವಾಮೀಜಿ ಬರೆದಿದ್ದಾರೆ ಎಂದು ಸಂತೋಷ್ ಬಾಬು ಹೇಳಿದರು.
ರಾಮನಗರ: ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾ (Basavalinga Swamiji) ಅವರ ಆತ್ಮಹತ್ಯೆಗೆ ಸಂಬಂಧಿಸಿದ ಒಂದಷ್ಟು ಮಾಹಿತಿಯನ್ನು ರಾಮನಗರದ ಪೊಲೀಸ್ ವರಿಷ್ಠಾಧಿಕಾರಿ ಕೆ ಸಂತೋಷ್ ಬಾಬು (K Santosh Babu) ಹಂಚಿಕೊಂಡಿದ್ದಾರೆ. ಸ್ವಾಮೀಜಿನ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಮೂರು ಪುಟಗಳ ಡೆತ್ ನೋಟ್ (death note) ಸಿಕ್ಕಿರುವುದು ನಿಜ, ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಡೆತ್ ನೋಟ್ ಮತ್ತು ಪೊಲೀಸರಿಗೆ ಸಿಕ್ಕಿರುವ ಡೆತ್ ನೋಟ್ ಸಾಕಷ್ಟು ವ್ಯತ್ಯಾಸವಿದೆ ಎಂದು ಎಸ್ ಪಿ ಹೇಳಿದರು. ಡೆತ್ ನೋಟ್ ನಲ್ಲಿ ಅವರು ಕೆಲವು ಹೆಸರುಗಳನ್ನು ಉಲ್ಲೇಖಿಸಿದ್ದಾರೆ, ಆದರೆ ಸ್ವಾಮೀಜಿಗಳ ಸಾವಿನಲ್ಲಿ ಅವರ ಪಾತ್ರವೇನೂ ಇಲ್ಲ. ಮತ್ತೊಬ್ಬ ಅನಾಮಧೇಯ ವ್ಯಕ್ತಿಯ ಬಗ್ಗೆ ಅವರು ಉಲ್ಲೇಖಿಸಿ ಅವನಾಡಿರುವ ಮಾತುಗಳಿಂದ ಬೇಜಾರಾಗಿದೆ ಅಂತ ಬರೆದಿದ್ದಾರೆ ಎಂದು ಸಂತೋಷ್ ಬಾಬು ಹೇಳಿದರು.