ಪರಿಚಿತ ಯುವಕನಿಂದಲೇ ನಡೆಯಿತಾ ಶಿಕ್ಷಕಿ ದೀಪಿಕಾ ಕೊಲೆ? ಮೂರು ದಿನಗಳಿಂದ ಅವನು ನಾಪತ್ತೆ ಅಂತಾರೆ ಮೃತಳ ಪತಿ!

Updated on: Jan 23, 2024 | 2:29 PM

ದೀಪಿಕಾ ಮತ್ತು ಯುವಕನ ನಡುವೆ ಸ್ನೇಹವೇನೂ ಇರಲಿಲ್ಲ, ಒಂದೇ ಊರಿನವರಾದ ಕಾರಣ ಪರಿಚಯವಿತ್ತು ಮತ್ತು ಅವನ್ಯಾವತ್ತೂ ಮನೆಗೆ ಬಂದವನಲ್ಲ ಎಂದು ದೀಪಿಕಾ ಪತಿ ಹೇಳುತ್ತಾರೆ. ದೀಪಿಕಾ ಫೋನ್ ಗೆ ಅದೇ ಯುವಕನಿಂದ ಕೊನೆಯ ಕಾಲ್ ಬಂದಿದ್ದು ಎಂದು ಅವರು ಹೇಳುತ್ತಾರೆ.

ಮಂಡ್ಯ: ನಿನ್ನೆ ಸಾಯಂಕಾಲ ಮೇಲುಕೋಟೆ ಬೆಟ್ಟದ ತಪ್ಪಲಲ್ಲಿ ಶವವಾಗಿ ಪತ್ತೆಯಾದ ಖಾಸಗಿ ಶಾಲೆಯೊಂದರ ಶಿಕ್ಷಕಿ 28-ವರ್ಷ ವಯಸ್ಸಿನ ದೀಪಿಕಾ (Deepika) ಕೊಲೆಯಾಗಿದ್ದು ದೃಢಪಟ್ಟಿದೆ. ದೀಪಿಕಾ ಪತಿ ಹೇಳುವ ಹಾಗೆ ಅವರ ಕುಟುಂಬಕ್ಕೆ ಪರಿಚಿತನಾಗಿದ್ದು ಒಬ್ಬ ಯುವಕ (youth) ಆಕೆಯ ಕೊಲೆ ಮಾಡಿದ್ದಾನೆ. ಈಗ ನಾಪತ್ತೆಯಾಗಿರುವ ಯುವಕ ದೀಪಿಕಾರನ್ನು ಅಕ್ಕ ಅಂತಲೇ ಕರೆಯುತ್ತಿದ್ದ ಮತ್ತು ಅವರ ಪತಿಯನ್ನು ಅಣ್ಣ ಅನ್ನುತ್ತಿದ್ದನಂತೆ. ಯುವಕನಿಗೆ ನಿರ್ದಿಷ್ಟವಾದ ಉದ್ಯೋಗ (job) ಅಂತ ಇರಲಿಲ್ಲ ಊರಲ್ಲಿ ವ್ಯವಸಾಯ ಮಾಡಿಕೊಂಡಿದ್ದವನು ಕೆಲಸಕ್ಕೆ ಅಂತ ಮೈಸೂರಿಗೂ ಹೋಗುತ್ತಿದ್ದನಂತೆ. ದೀಪಿಕಾ ಮತ್ತು ಯುವಕನ ನಡುವೆ ಸ್ನೇಹವೇನೂ ಇರಲಿಲ್ಲ, ಒಂದೇ ಊರಿನವರಾದ ಕಾರಣ ಪರಿಚಯವಿತ್ತು ಮತ್ತು ಅವನ್ಯಾವತ್ತೂ ಮನೆಗೆ ಬಂದವನಲ್ಲ ಎಂದು ದೀಪಿಕಾ ಪತಿ ಹೇಳುತ್ತಾರೆ. ದೀಪಿಕಾ ಫೋನ್ ಗೆ ಅದೇ ಯುವಕನಿಂದ ಕೊನೆಯ ಕಾಲ್ ಬಂದಿದ್ದು ಎಂದು ಹೇಳುವ ಅವರು ತನ್ನನ್ನು ಮತ್ತು ತಮ್ಮ ಮಗನನ್ನು ದೀಪಿಕಾ ಒಂದು ಗಂಟೆ ಕೂಡ ಬಿಟ್ಟಿರುತ್ತಿರಲಿಲ್ಲ ಎನ್ನುತ್ತಾರೆ. ದೀಪಿಕಾ ನಾಪತ್ತೆಯಾದ ಬಗ್ಗೆ ದೂರು ಸಲ್ಲಿಸಿದ ಬಳಿಕ ಪೊಲೀಸರು ಕೂಡಲೇ ಕಾರ್ಯೋನ್ಮುಖರಾಗಲಿಲ್ಲ, ಪ್ರಕರಣ ದಾಖಲಿಸಿಕೊಳ್ಳಲು ಒಂದು ದಿನದಷ್ಟು ಸಮಯ ತೆಗೆದುಕೊಂಡರು ಎಂದು ದೀಪಿಕಾ ಪತಿ ದೂರುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More