Daily Horoscope: ಈ ರಾಶಿಯವರಿಗೆ ಇಂದು ವ್ಯಾಪಾರದಲ್ಲಿ ಲಾಭವಾಗಲಿದೆ
ಈ ಲೇಖನವು ಪ್ರಸಿದ್ಧ ಜ್ಯೋತಿಷಿ ಬಸವರಾಜ್ ಗುರೂಜಿ ಅವರಿಂದ ಇಂದಿನ ದೈನಂದಿನ ರಾಶಿ ಭವಿಷ್ಯವನ್ನು ಒಳಗೊಂಡಿದೆ. ಇದು ವಿವಿಧ ರಾಶಿಚಕ್ರ ಚಿಹ್ನೆಗಳಿಗೆ ಭವಿಷ್ಯವಾಣಿಗಳನ್ನು ನೀಡುತ್ತದೆ ಮತ್ತು ನಿತ್ಯ ಪಂಚಾಂಗದ ಮಾಹಿತಿಯನ್ನೂ ಒಳಗೊಂಡಿದೆ. ಗ್ರಹಗಳ ಸ್ಥಾನ ಮತ್ತು ಚಲನೆಗಳ ಆಧಾರದ ಮೇಲೆ ಭವಿಷ್ಯವಾಣಿಗಳನ್ನು ಮಾಡಲಾಗಿದೆ. ಜ್ಯೋತಿಷ್ಯದಲ್ಲಿ ಆಸಕ್ತಿ ಹೊಂದಿರುವವರಿಗೆ ಈ ಲೇಖನ ಉಪಯುಕ್ತವಾಗಿದೆ.
ನಾಗರೀಕತೆ ಪ್ರಾರಂಭವಾದಾಗಿನಿಂದಲೂ ಭವಿಷ್ಯವನ್ನು ಇಣುಕಿನೋಡುವ ಕುತೂಹಲ ಮಾನವನಿಗೆ ಸಹಜವಾಗಿ ಬಂದಿದೆ. ನಾಳೆ ಎನ್ನುವುದು ಸದಾ ರಹಸ್ಯದ ಆಗರ. ಇಂದಿದ್ದವನು ನಾಳೆ ಇಲ್ಲ. ಬಡವ ಬಲ್ಲಿದನಾಗುವನು. ಬಲ್ಲಿದ ದರಿದ್ರನಾಗುವನು. ಈ ವಿಚಿತ್ರವನ್ನು ತಿಳಿಯಲು ಮಾನವನ ಪ್ರಯತ್ನ ಅಗಾಧ. ಗ್ರಹ ನಕ್ಷತ್ರಗಳ ಸ್ಥಾನ ಚಲನೆಗಳನ್ನು ತಿಳಿಸುವುದಷ್ಟೇ ಜ್ಯೋತಿಷ ಶಾಸ್ತ್ರದ ಕೆಲಸ. ಅವುಗಳ ಆಧಾರದ ಮೇಲೆ ವ್ಯಕ್ತಿಯ ಮೇಲಾಗುವ ಪರಿಣಾಮಗಳನ್ನು ತಿಳಿಸುವುದು ಫಲಜ್ಯೋತಿಷ. ಇದು ಖಗೋಳ ಗಣಿತಜ್ಞರಾದ ಭಾಸ್ಕರಾಚಾರ್ಯ ಮತ್ತು ವರಾಹ ಮಿಹಿರ ಮೊದಲಾದವರ ಕಾಲದಿಂದಲೂ ರೂಢಿಗೆ ಬಂದಿದೆ. ಇಂದಿನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಹಾನಕ್ಷತ್ರ: ಮೂಲಾ, ಮಾಸ: ಮಾರ್ಗಶಿರ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಸಪ್ತಮಿ, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ಆಯುಷ್ಮನ್, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 54 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 08 ನಿಮಿಷಕ್ಕೆ, ರಾಹು ಕಾಲ ಸಂಜೆ 04:44 ರಿಂದ 06:08ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:32 ರಿಂದ 01:56 ರವರೆಗೆ, ಗುಳಿಕ ಕಾಲ ಬೆಳಿಗ್ಗೆ 03:20 ರಿಂದ 04:44 ರವರೆಗೆ.