ಪ್ರತಾಪ್ ಸಿಂಹ ಧೃತಿಗೆಡದೆ ತಾಳ್ಮೆಯಿಂದಿರಬೇಕು, ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು: ಆರ್ ಅಶೋಕ
ಯದುವೀರ್ ಅವರಿಗೆ ಟಿಕೆಟ್ ನೀಡುವ ಬಗ್ಗೆ ತನಗೆ ಮಾಹಿತಿ ಇಲ್ಲ ಮತ್ತು ತಾನು ಅವರಿಗೆ ಫೋನ್ ಕೂಡ ಮಾಡಿಲ್ಲ ಎಂದು ಅಶೋಕ ಹೇಳಿದರು. ಟಿಕೆಟ್ ಯಾರಿಗೆ ಸಿಕ್ಕರೂ ಜಿಲ್ಲಾ ಘಟಕದ ಕಾರ್ಯಕರ್ತರೆಲ್ಲ ಅವರ ಪರವಾಗಿ ಕೆಲಸ ಮಾಡಲಿದ್ದಾರೆ ಎಂದು ಮೈಸೂರು ಜಿಲ್ಲಾಧ್ಯಕ್ಷರು ಹೇಳಿದ್ದಾರೆ ಮತ್ತು ಪ್ರತಾಪದ ಸಿಂಹ ಸಹ ಅಭ್ಯರ್ಥಿಯ ಕರಪತ್ರಗಳನ್ನು ಹಂಚುವುದಾಗಿ ಹೇಳಿದ್ದಾರೆ ಎಂದು ಆಶೋಕ ತಿಳಿಸಿದರು.
ಬೆಂಗಳೂರು: ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ (Pratap Simha) ಹತಾಶರಾಗಿರುವುದನ್ನು ರಾಜ್ಯದ ಜನತೆ ಗಮನಿಸುತ್ತಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಗದಿರುವುದು ಆಲ್ಮೋಸ್ಟ್ ಖಚಿತವಾಗಿದ್ದು ವರಿಷ್ಠರು ಹಿಂದಿನ ಒಡೆಯರ್ ಅರಸೊತ್ತಿಗೆಯ ಪ್ರತಿನಿಧಿ ಯದುವೀರ್ ಕೃಷ್ಣದತ್ ಒಡೆಯರ್ (Yaduveer Krishna Dutt Wodeyar) ಅವರಿಗೆ ನೀಡಲು ತೀರ್ಮಾನ ತೆಗೆದುಕೊಂಡಂತಿದೆ. ಆದರೆ ಅಧಿಕೃತವಾಗಿ ಇದುವರೆಗೆ ಯಾವುದೂ ದೃಢಪಟ್ಟಿಲ್ಲ. ಇಂದು ಬೆಂಗಳೂರಲ್ಲಿ ಟಿವಿ9 ವರದಿಗಾರನೊಂದಿಗೆ ಮಾತಾಡಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ (R Ashoka) ಟಿಕೆಟ್ ಹಂಚಿಕೆ ಇನ್ನೂ ದೃಢಪಡದ ಕಾರಣ ಪ್ರತಾಪ್ ಸಿಂಹ ಧೃತಿಗೆಡುವ ಅಗತ್ಯವಿಲ್ಲ, ಅವರು ಕೊನೆವರೆಗೆ ತಾಳ್ಮೆ ಪ್ರದರ್ಶಿಸಬೇಕು, ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂದು ಹೇಳಿದರು. ಯದುವೀರ್ ಅವರಿಗೆ ಟಿಕೆಟ್ ನೀಡುವ ಬಗ್ಗೆ ತನಗೆ ಮಾಹಿತಿ ಇಲ್ಲ ಮತ್ತು ತಾನು ಅವರಿಗೆ ಫೋನ್ ಕೂಡ ಮಾಡಿಲ್ಲ ಎಂದು ಅಶೋಕ ಹೇಳಿದರು. ಟಿಕೆಟ್ ಯಾರಿಗೆ ಸಿಕ್ಕರೂ ಜಿಲ್ಲಾ ಘಟಕದ ಕಾರ್ಯಕರ್ತರೆಲ್ಲ ಅವರ ಪರವಾಗಿ ಕೆಲಸ ಮಾಡಲಿದ್ದಾರೆ ಎಂದು ಮೈಸೂರು ಜಿಲ್ಲಾಧ್ಯಕ್ಷರು ಹೇಳಿದ್ದಾರೆ ಮತ್ತು ಪ್ರತಾಪದ ಸಿಂಹ ಸಹ ಅಭ್ಯರ್ಥಿಯ ಕರಪತ್ರಗಳನ್ನು ಹಂಚುವುದಾಗಿ ಹೇಳಿದ್ದಾರೆ ಎಂದು ಆಶೋಕ ತಿಳಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು ಮಾಡದಿದ್ದರೂ ಪರವಾಗಿಲ್ಲ, ‘ಬಾಂಬ್ ಬೆಂಗಳೂರು’ ಕಳಂಕ ತರಬೇಡಿ ಎಂದ ಆರ್. ಅಶೋಕ್