ಈ ಬೆಳಕಿನ ಹಬ್ಬ ದೀಪಾವಳಿಯ ಮೊದಲ ದಿನದಂದು ನರಕ ಚತುರ್ದಶಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ವಿಶೇಷವಾಗಿ ದಕ್ಷಿಣ ಭಾರತದ ಹಲವೆಡೆ ಅಭ್ಯಂಜನ ಸ್ನಾನವನ್ನು ಮಾಡುವ ಸಂಪ್ರದಾಯವಿದೆ. ಈ ದಿನ ಸೂರ್ಯೋದಯಕ್ಕೂ ಮುಂಚೆ ಎದ್ದು ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆ ತೊಟ್ಟು ದೇವರನ್ನು ಭಕ್ತಿ ಪೂರ್ವಕವಾಗಿ ಪೂಜಿಸುವ ಪದ್ದತಿಯಿದೆ. ಈ ಅಭ್ಯಂಜನ ಸ್ನಾನವನ್ನು ಮಾಡುವುದೇಕೇ? ಅದರ ಮಹತ್ವವೇನು? ಈ ಬಾರಿ ಅಭ್ಯಂಜನ ಸ್ನಾನಕ್ಕೆ ಶುಭ ಮುಹೂರ್ತ ಯಾವುದು ಇವೆಲ್ಲದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.