ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗದಿದ್ದರೆ ಸಾಕು: ಕುಮಾರಸ್ವಾಮಿ
ಅನ್ನಭಾಗ್ಯ ಯೋಜನೆ ಅಡಿ ಬಡಜನರಿಗೆ ನೀಡುವ ಅಕ್ಕಿಯನ್ನು ಸಹ ಕಡಿತಗೊಳಿಸುವ ಯೋಚನೆ ಸರ್ಕಾರ ಮಾಡುತ್ತಿದೆ ಎಂದ ಕುಮಾರಸ್ವಾಮಿ, ಜನರ ವೋಟು ಪಡೆಯುವುದು ಬಿಟ್ಟರೆ ಇಂಥ ಯೋಜನೆಗಳಿಂದ ಪ್ರಯೋಜನವಿಲ್ಲ, ರಾಜ್ಯ ದಿವಾಳಿಯಾಗಬಾರದೆನ್ನುವುದು ತಮ್ಮ ಆಶಯ, ಹೊಟ್ಟೆಯುರಿ ಇಲ್ಲ ಎಂದರು.
ರಾಮನಗರ: ರಾಜ್ಯ ಸರ್ಕಾರ ಶಕ್ತಿಯೋಜನೆಯನ್ನು ಸ್ಥಗಿತಗೊಳಿಸುವ ಯೋಚನೆಯಲ್ಲಿರುವಂತಿದೆ, ಉಳಿದ 4ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಇನ್ನೆಷ್ಟು ದಿನ ನಡೆಸಲಿದೆ ಅಂತ ಕಾದುನೋಡಬೇಕಿದೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದರು. ನಮ್ಮ ವರದಿಗಾರನೊಂದಿಗೆ ಮಾತಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ರಾಜ್ಯ ಸರ್ಕಾರ ಜನರ ತೆರಿಗೆ ಹಣದಲ್ಲಿ ನೀಡುತ್ತಿದೆ, ಸಹಜವಾಗೇ ಕರ್ನಾಟಕದ ಆರ್ಥಿಕ ಶಕ್ತಿ ಕುಂದಿದೆ ಮತ್ತು ಅಭಿವೃದ್ಧಿ ಕಾರ್ಯಗಳೆಲ್ಲ ನಿಂತು ಹೋಗಿವೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಉಪಚುನಾವಣೆ ಬಳಿಕ ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಜಾರಿ: ಕುಮಾರಸ್ವಾಮಿ ಬಾಂಬ್